ದೋಹಾ: “ಹಬೀಬ್ (ಸ) ರ ಹಾದಿಯಲ್ಲಿ ಗೆಲುವಿದೆ” ಎಂಬ ಘೋಷ ವಾಕ್ಯದೊಂದಿಗೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಕೊಲ್ಲಿ ರಾಷ್ಟ್ರಗಳಾದ್ಯಂತ ಆಚರಿಸಿ ಬರುವ ಮೀಲಾದ್ ಸಂಗಮದ ಭಾಗವಾಗಿ ಖತ್ತರ್ ರಾಷ್ಟ್ರೀಯ ಸಮಿತಿ ವತಿಯಿಂದ ಮೀಲಾದ್ ಸಮಾವೇಶವು ವಿಜೃಂಭಣೆಯಿಂದ ನಡೆಯಿತು.
ಅಕ್ಟೋಬರ್, 13 ರಂದು ದೋಹಾ “ಷಾಝಾ ಆಡಿಟೋರಿಯಂನಲ್ಲಿ”
ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ (ಅಯ್ಯಂಗೇರಿ) ಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಸಮಾವೇಶವನ್ನು ಸಲಹಾ ಸಮಿತಿ ಚೆಯರ್ಮೆನ್ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ(ಎಮ್ಮೆಮಾಡು)
ಉದ್ಘಾಟಿಸಿದರು. ಕರಾವಳಿಯ ಖ್ಯಾತವಾಗ್ಮಿ ಮಹ್ರೂಫ್ ಸುಲ್ತಾನಿ ಹುಬ್ಬುರ್ರಸೂಲ್ ಭಾಷಣ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಬ್ಬಾಸ್ ಸಖಾಫಿ ಬಲಮುರಿ (ಮೀಡಿಯಾ ವಿಂಗ್ ಚೆಯರ್ಮೆನ್ KSWA GCC ಸಮಿತಿ) KCF ಖತ್ತರ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಖ್ ಕೃಷ್ಣಾಪುರ,ಸಯ್ಯದ್ ಅರ್ಷದಲಿ ತಂಗಳ್, ಯಹ್ಯಾ ಸಅದಿ ಕಡಂಗ (ರಾಷ್ಟ್ರೀಯ ಸಮಿತಿ ಖೋಶಾಧಿಕಾರಿ) ಮುಹಮ್ಮದ್ ಬೇತ್ರಿ ಮುಂತಾದವರು ಸಬೆಯನ್ನುದ್ದೇಶಿಸಿ ಮಾತನಾಡಿದರು.
ಆಸಿಫ್ ಅನ್ವಾರಿ (ಕಂಡಕ್ಕರೆ) ಇಸ್ಹಾಕ್ ನಿಝಾಮಿ (ಕೊಡ್ಲಿಪೇಟೆ) ತಂಡದಿಂದ ಬುರ್ಧಾ ಬೈತ್ ಮತ್ತು ನ:ಅತೇ ಶರೀಫ್ ಆಲಾಪನೆ ಇಮ್ರಾನ್ ಮಡಿಕೇರಿ ಮತ್ತು ಜಾಬಿರ್ ಪಡಿಯಾಣಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು..
ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಶಫೀಕ್ (ತಾವೂರ್) ಸ್ವಾಗತಿಸಿ ನಝೀರ್ ಮೂರ್ನಾಡು ಕಾರ್ಯಕ್ರಮವನ್ನು ನಿರೂಪಿಸಿ ಕೊನೆಯಲ್ಲಿ ವಂದಿಸಿದರು.