ವಿಟ್ಲ ಕೊಡಂಗಾಯಿ ಟಿಪ್ಪು ನಗರ ದಾರುನ್ನಜಾತ್ ವಿದ್ಯಾ ಸಂಸ್ಥೆಯ ಸ್ಥಾಪಕ ಮರ್ಹೂಂ ಶೈಖುನಾ ಅಬೂಬಕರ್ ಮುಸ್ಲಿಯಾರವರ ಮೂರನೇ ಆಂಡ್ ನೇರ್ಚೆ ಸೆ.30 ಮತ್ತು ಅಕ್ಟೋಬರ್ 1, 2 ದಿವಸಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಬಹಳ ಯಶಸ್ವಿಯಾಗಿ ಜರುಗಿತು.
ಶುಕ್ರವಾರ ಮಧ್ಯಾಹ್ನ ಸಂಸ್ಥೆಯ ಅಧ್ಯಕ್ಷರಾದ ಮಹ್ಮೂದುಲ್ ಫೈಝಿಯವರು ಧ್ವಜಾರೋಹಣ ನಿರ್ವಹಿಸಿ,ಮುದರ್ರಿಸ್ ಸಯ್ಯಿದ್ ಶಮೀಮ್ ಅಲ್ ಬುಖಾರಿ ತಂಙಳ್ ಮಖ್ಬರ ಝಿಯಾರತ್ ಗೆ ನೇತೃತ್ವದ ನೀಡಿದರು.
ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಕಂಪ್ಯೂಟರ್ ಸೆಂಟರ್ ಉದ್ಘಾಟಿಸಿದರು.
ಅಬೂಬಕ್ಕರ್ ಹಾಜಿ ಮಂಜೇಶ್ವರ ಅವರ ಅಧ್ಯಕ್ಷತೆಯಲ್ಲಿ ಸ್ನೇಹ ಸಂಗಮ ಕಾರ್ಯಕ್ರಮ ನಡೆಯಿತು. ಡಾ|ರವಿಶಂಕರ್ ಸಿ.ಜಿ ಬಲಿಪಗೊಳಿ ಉದ್ಘಾಟಿಸಿದರು. ಪರಸ್ಪರ ಪ್ರೀತಿ, ಸೌಹಾರ್ದತೆಯಿಂದ ಎಲ್ಲರೂ ಜೀವಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ಅದಕ್ಕೆ ಈ ಸ್ನೇಹ ಸಂಗಮ ಸಾಕ್ಷಿಯಾಗಲಿ ಎಂದು ಶುಭ ಹಾರೈಸಿದರು. ರಾತ್ರಿ ಅಸ್ಸಯ್ಯದ್ ಪುಕುಂಞೆ ಕೋಯ ತಂಙಳ್ ಉದ್ಯಾವರ ದುಆದೊಂದಿಗೆ ಶುಕೂರ್ ಇರ್ಫಾನಿ ಬಳಗದಿಂದ ಬೃಹತ್ ಬುರ್ದಾ ಮಜ್ಲಿಸ್ ಜರುಗಿತು.
ಶನಿವಾರ ಬೆಳಿಗ್ಗೆ ಮಜ್ಲಿಸ್ ದಾರುನ್ನಜಾತ್ ವತಿಯಿಂದ ಶಿಷ್ಯ ಸಂಗಮ ಹಾಗೂ ಖತಮುಲ್ ಕುರ್ ಆನ್ ಮಜ್ಲಿಸ್ ನಡೆಯಿತು.
ಅನುಸ್ಮರಣೆ ಹಾಗೂ ಸಮಾರೋಪ ಸಮಾರಂಭವು ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಅವರ ದುಆದೊಂದಿಗೆ ಆರಂಭಗೊಂಡಿತು. ಸಮಾರಂಭದ ಅಧ್ಯಕ್ಷತೆಯನ್ನು ಮಹ್ಮೂದುಲ್ ಫೈಝಿ ವಾಲೆಮುಂಡೋವು ಉಸ್ತಾದ್ ನಿರ್ವಹಿಸಿದರು. ಉದ್ಘಾಟನೆ ನಿರ್ವಹಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷರಾದ ಮುಹಮ್ಮದ್ ಮುಸ್ಲಿಯಾರ್ ಝಾರ್ವಾನಿ ದುಬೈ “ವಿದ್ಯಾಸಂಸ್ಥೆಗಳ ಮೂಲಕ ಉತ್ತಮ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಹೊರತಂದು ನಾಡಿಗೆ ಸಮರ್ಪಿಸುವಂತೆ ಆಗಲಿ. ಆ ನಿಟ್ಟಿನಲ್ಲಿ ಮರ್ಹೂಂ ಅಬೂಬಕರ್ ಮುಸ್ಲಿಯರ್ ತೋರಿಸಿದ ಆದರ್ಶ ನಮಗೆಲ್ಲರಿಗೆ ಮಾದರಿಯಾಗಿದೆ” ಎಂದರು.ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಉಸ್ಮಾನ್ ಸಖಾಫಿ ಮಾತನಾಡಿದರು.
ಅತಿಥಿಗಳಾಗಿ ಶೈಖುನಾ ಕನ್ಯಾನ ಉಸ್ತಾದ್, ಅಸ್ಸಯ್ಯದ್ ಶಮೀಮ್ ಅಲ್ ಬುಖಾರಿ ತಂಙಳ್ ಮುದರ್ರಿಸ್ ದಾರುನ್ನಜಾತ್, ಎ.ಪಿ ಅಬೂಬಕ್ಕರ್ ಸಖಾಫಿ, ಖಾದರ್ ಸಖಾಫಿ ಕಡಂಬು,ಖಾದರ್ ಫೈಝಿ, ಎಂ ಎಸ್ ಮೊಹಮ್ಮದ್, ಹಕೀಂ ಪರ್ತಿಪಾಡಿ,ವಿಟ್ಲ ಪಡ್ನೂರು ಪಂಚಾಯತ್ ಮಾಜಿ ಅ್ಯಕ್ಷರಾದ ರವೀಶ್ ಶೆಟ್ಟಿ, ಕೆ ಎಸ್ ಸುಲೈಮಾನ್ ಟಿಪ್ಪು ನಗರ,ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಉಪಧ್ಯಕ್ಷರಾದ ನಾಗೇಶ್ ಶೆಟ್ಟಿ,ಪಂಚಾಯತ್ ಸದಸ್ಯರಾದ ಸಂದೇಶ ಶೆಟ್ಟಿ, ಡಾ ಹಸೈನಾರ್ ಟಿಪ್ಪುನಗರ, ಉಮೇಶ್ ಶೆಟ್ಟಿ, ಹರೀಶ್ , ಎಸ್ ಎಂ ಎ ಅಧ್ಯಕ್ಷರಾದ ಹಕೀಂ ವಿಟ್ಲ, ಇಸ್ಮಾಯಿಲ್ ಕನ್ಯಾನ, ಅಬ್ದುಲ್ ರಹ್ಮಾನ್ ಮುಸ್ಲಿಯರ್, ಅಬ್ದುಲ ಮುಸ್ಲಿಯಾರ್,ಹಸೈನಾರ್ ಮುಸ್ಲಿಯಾರ್,ಹಮೀದ್ ಸಖಾಫಿ ಹಾಫಿಳ್ ಶೆರೀಫ್ ಮುಸ್ಲಿಯಾರ್,ಇಬ್ರಾಹಿಂ ಮುಸ್ಲಿಯಾರ್,ನಾಸೀರ್ ದುಬೈ, ಸಿರಾಜ್ ಎಂ ಎಸ್ ಎಂ, ಅಶ್ರಫ್ ಅಳಿಕೆ, ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷರು ಮಜ್ಲಿಸ್ ದಾರುನ್ನಜಾತ್, ಅಬ್ದುರಝಾಖ್ ಸಅದಿ ಕೊಡಿಪ್ಪಾಡಿ,ಅಬೂಬಕ್ಕರ್ ಫೈಝಿ, ಶರೀಫ್ ಮದನಿ ಪೇರುವಾಯಿ ಉಮ್ಮರ್ ವಿಟ್ಲ ಉಪಸ್ಥಿತರಿದ್ದರು.ಸಂಸ್ಥೆಯ ಜನರಲ್ ಮೆನೇಜರ್ ಹಾಜಿ ಹಮೀದ್ ಕೊಡಂಗಾಯಿ ಸ್ವಾಗತಿಸಿದರು.