janadhvani

Kannada Online News Paper

ಅಕ್ಟೋಬರ್ 03 ‘ಬ್ಯಾರಿ ಬಾಷೆರೊ ಕೊಂಡಾಡ್ ರೊ ನಾಲ್’ ಎಂಬ ಭಾಷಾ ದಿನಾಚರಣೆ

ಅಕ್ಟೋಬರ್ 03 ರಂದು ಈ ಹಿಂದೆ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯು ಬ್ಯಾರಿ ಸಾಹಿತ್ಯ ಅಕಾಡೆಮಿ ಯನ್ನು ಮಂಜೂರು ಮಾಡಿತ್ತು.

ಮಂಗಳೂರು: ಬ್ಯಾರಿ ಕಲಾ ರಂಗ ಮೈಕಾಲ ವತಿಯಿಂದ 2022,ಅಕ್ಟೋಬರ್ 3 ರಂದು ‘ಬ್ಯಾರಿ ಬಾಷೆರೊ ಕೊಂಡಾಡ್ ರೊ ನಾಲ್’ ಎಂಬ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರು ಸ್ಟೇಟ್ ಬ್ಯಾಂಕ್ ಸಮೀಪದ ನೆಲ್ಲಿಕ್ಕಾಯಿ ರಸ್ತೆಯಲ್ಲಿನ ಪಾಯನೀರ್ ಕಾಂಪ್ಲೆಕ್ಸ್ ಕಟ್ಟಡದ ಮೆಲ್ಮಹಡಿಯಲ್ಲಿನ ನೇಷನಲ್ ಟ್ಯು ಟರಿಯಲ್ ಸಭಾಂಗಣದಲ್ಲಿ ಬೆಳಿಗ್ಗೆ ಗಂಟೆ 10.30 ಕ್ಕೆ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಅಝೀಝ್ ಬೈಕಂಪಾಡಿ ವಹಿಸಲಿದ್ದಾರೆ.

ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಝಾದ್ ರವರು ಭಿತ್ತಿಪತ್ರ ಬಿಡುಗಡೆ ಮಾಡಲಿದ್ದು, ಅತಿಥಿಯಾಗಿ ಕರ್ನಾಟಕ ರಾಜ್ಯ ಜೆ.ಡಿ.ಎಸ್. ಕಾರ್ಯದರ್ಶಿ ಹೈದರ್ ಪರ್ತಿಪ್ಪಾಡಿ, ಸಂಗೀತ ನಿರ್ದೇಶಕ ವಿಜಯ ಕುಮಾರ್, ಸಾರಂಗ್ ರೇಡಿಯೋ ದ್ವನಿ ಸಂಸ್ಥೆಯ ವರದಿಗಾರ ಎಡ್ವರ್ಡ್ ಲೋಬೋ ರವರು ಭಾಗ ವಹಿಸಲಿದ್ದಾರೆ.

ಅಕ್ಟೋಬರ್ 03 ರಂದು ಈ ಹಿಂದೆ ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯು ಬ್ಯಾರಿ ಭಾಷೆಯ ಮಹತ್ವವನ್ನು ಪರಿಗಣಿಸಿ, ಬ್ಯಾರಿ ಸಾಹಿತ್ಯವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಯನ್ನು ಮಂಜೂರು ಮಾಡಿತ್ತು. ಆ ಮೂಲಕ ಈ ಹಿಂದೆ ಸರಕಾರ ಬ್ಯಾರಿ ಸಾಹಿತ್ಯವನ್ನು ಮಾನ್ಯತೆಯ ವ್ಯಾಪ್ತಿಯಲ್ಲಿ ಒಳಪಡಿಸಿತ್ತು. ಈ ಉದ್ದೇಶಕ್ಕಾಗಿ ಸರಕಾರ ಬ್ಯಾರಿ ಸಾಹಿತ್ಯ ಅಕಾಡಮಿ ಸ್ಥಾಪನೆಗೊಳಿಸಿದೆ.

ಈ ನಿಟ್ಟಿನಲ್ಲಿ ಬ್ಯಾರಿ ಕಲಾ ರಂಗ ಸಂಸ್ಥೆಯು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ, ಪ್ರಧಾನ ಕಾರ್ಯದರ್ಶಿ ಖಾಲಿದ್ ಉಜಿರೆ, ಪ್ರಧಾನ ಸಂಚಾಲಕರಾದ ಹುಸೈನ್ ಕಾಟಿಪಳ್ಳ ಮತ್ತು ಸದಸ್ಯರು ಈ ದಿನವನ್ನು ಬ್ಯಾರಿ ಭಾಷಾಚರಣೆ ದಿನವಾಗಿ ಪರಿಗಣಿಸಿ ಅಭಿಯಾನ ಕಾರ್ಯಕ್ರಮ ರೂಪಿಸಿದ್ದಾರೆ.

ಧಾರ್ಮಿಕ ಬೋಧನಾ ಕೇಂದ್ರಗಳಲ್ಲಿ ಬ್ಯಾರಿ ಭಾಷಾ ಬಳಕೆ, ಮನೆಯಲ್ಲಿ ಮಕ್ಕಳೊಂದಿಗೆ ಬ್ಯಾರಿ ಭಾಷೆಯಲ್ಲಿ ಸಂವಹನ ಸಂಭಾಷಣೆ, ವಾಲ್ ಪ್ರವಚನ, ನಿಖಾ ಸಂದರ್ಭಗಳಲ್ಲಿ ಇದೇ ಭಾಷೆ ಬಳಕೆ, ಬರಹಗಾರರು ಇದೇ ಭಾಷೆಯಲ್ಲಿ ತಮ್ಮ ಬರಹ, ಕಥೆ, ಕವನ, ಹಾಡು ಇತ್ಯಾದಿ ಬರೆಯುವಿಕೆಗೆ ಉತ್ತೇಜನ, ಬ್ಯಾರಿ ಬರಹಗಾರರಿಗೆ ಧನ ಸಹಾಯ, ಬ್ಯಾರಿ ಸಂಸ್ಕೃತಿ ಯನ್ನು ಮುಂದಿನ ಪೀಳಿಗೆಗೆ ಪರಿಚಯ, ಇನ್ನಿತರ ಭಾಷೆ ಯೊಂದಿಗೆ, ಬ್ಯಾರಿ ಭಾಷೆಯ ಒಡನಾಟ ಅಧಿಕ ಗೊಳಿಸುವುದು, ಬ್ಯಾರಿ ಬಾಷಾ ಉತ್ತೇಜಿತ ಸಂಸ್ಥೆಗಳಿಗೆ ಬೆಂಬಲ ಇತ್ಯಾದಿ ಘೋಷ ವಾಕ್ಯದೊಂದಿಗೆ ಭಿತ್ತಿ ಪತ್ರ ಅಭಿಯಾನ ವನ್ನು ಕೈ ಗೊಂಡಿದೆ.

ಅಕ್ಟೋಬರ್ 03 ನೇ ತಾರೀಖಿನಂದು ಸೋಮವಾರ ಬ್ಯಾರಿ ಬಾಷೆ ರೊ ಕೊಂಡಾಡ್ ರೊ ನಾಲ್ ಅಂಗವಾಗಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ, ಎಂದು ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬೈಕಂಪಾಡಿ ಹೇಳಿಕೆ ನೀಡಿದ್ದಾರೆ.