janadhvani

Kannada Online News Paper

4000 ಡಾಲರ್ ಬ್ಯಾಂಕ್ ಬ್ಯಾಲೆನ್ಸ್ ಇದ್ದಲ್ಲಿ 5 ವರ್ಷಗಳ ವಿಸಿಟ್ ವೀಸಾ ಲಭ್ಯ

ವೀಸಾ ಪಡೆದ ನಂತರ, ಸತತ 90 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು. ಇದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು.

ದುಬೈ: ಐದು ವರ್ಷಗಳ ಯುಎಇ ಸಂದರ್ಶಕ ವೀಸಾಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೌಲಭ್ಯಗಳಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ದೇಶದವರಿಗೆ ಐದು ವರ್ಷಗಳ ಮಾನ್ಯತೆಯೊಂದಿಗೆ ಯುಎಇಗೆ ಬಹು ಪ್ರವೇಶ ಭೇಟಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು.

ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಅಂಡ್ ಸಿಟಿಜನ್‌ಶಿಪ್ ಐಸಿಪಿ ವೆಬ್‌ಸೈಟ್, ದುಬೈ ನಿವಾಸಿ ಇಲಾಖೆಯ ಜಿಡಿಆರ್‌ಎಫ್‌ಎ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಯುಎಇಯಲ್ಲಿರುವವರು ಅಮರ್ ಸೆಂಟರ್‌ಗಳ ಮೂಲಕವೂ ಅರ್ಜಿ ಸಲ್ಲಿಸಬಹುದು.1500 ದಿರ್ಹಮ್ ವೀಸಾ ಶುಲ್ಕ ನೀಡಬೇಕಾಗಿದೆ.ಅಲ್ಪ ಪ್ರಮಾಣದ ಸಂಗ್ರಹಣಾ ಕಮಿಷನ್ ಮತ್ತು ಅಮೆರ್ ಸೆಂಟರ್‌ಗಳ ಸೇವಾ ಶುಲ್ಕ ಹೆಚ್ಚುವರಿಯಾಗಿರುತ್ತದೆ.

ಅರ್ಜಿದಾರರು USD 4000 ಅಥವಾ ಸಮಾನ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಸ್ಟೇಟ್‌ಮೆಂಟ್ ಮತ್ತು ಯುಎಇಯ ಆರೋಗ್ಯ ವಿಮೆಯನ್ನು ಒದಗಿಸಬೇಕಾಗುತ್ತದೆ.

ಪಾಸ್ ಪೋರ್ಟ್ ನಕಲು ಪ್ರತಿ, ಬಿಳಿ ಹಿನ್ನೆಲೆಯುಳ್ಳ ಫೋಟೋ, ಯುಎಇಯಲ್ಲಿ ಎಲ್ಲಿ ತಂಗುತ್ತೀರಿ ಎಂಬುದನ್ನು ಸೂಚಿಸಲು ಸಂಬಂಧಿಯಿಂದ ಆಹ್ವಾನ ಪತ್ರಿಕೆ, ಹೋಟೆಲ್ ಬುಕ್ಕಿಂಗ್, ಬಾಡಿಗೆ ದಾಖಲೆ ಪತ್ರ ಇವುಗಳಲ್ಲಿ ಒಂದನ್ನು ಸಲ್ಲಿಸಬೇಕು.ಕೆಲವು ಸಂದರ್ಭಗಳಲ್ಲಿ ವಿಮಾನ ಟಿಕೆಟ್ ಅನ್ನು ಸಹ ಸಲ್ಲಿಸಬೇಕಾಗುತ್ತದೆ.

ಅರ್ಜಿಯನ್ನು ಸಲ್ಲಿಸಿದ ನಂತರ, ಇ-ಮೇಲ್ ಮತ್ತು SMS ಮೂಲಕ ಸ್ಟಾಟಸ್ ನೋಟಿಫಿಕೇಶನ್ ಲಭಿಸಲಿದೆ.ದಾಖಲೆಗಳ ಕೊರತೆಯಿದ್ದಲ್ಲಿ, ಅವುಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಇಲ್ಲದಿದ್ದರೆ, ಅರ್ಜಿಯನ್ನು ರದ್ದುಗೊಳಿಸಲಾಗುತ್ತದೆ. ದಾಖಲೆಗಳಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಅಸ್ಪಷ್ಟತೆ ಕಂಡುಬಂದರೆ ಅರ್ಜಿಯ ರದ್ದತಿಗೆ ಕಾರಣವಾಗುತ್ತದೆ.

ವೀಸಾ ಪಡೆದ ನಂತರ, ಸತತ 90 ದಿನಗಳವರೆಗೆ ದೇಶದಲ್ಲಿ ಉಳಿಯಬಹುದು. ಇದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಬಹುದು. ಆದರೆ, ಒಂದು ವರ್ಷದಲ್ಲಿ ಸತತ 180 ದಿನಗಳಿಗಿಂತ ಹೆಚ್ಚು ಕಾಲ ಯುಎಇಯಲ್ಲಿ ಇರಲು ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

error: Content is protected !! Not allowed copy content from janadhvani.com