ವಿಟ್ಲ :ಬದುಕಿನಲ್ಲಿ ಮಾನವೀಯ ಮೌಲ್ಯ ಗಳನ್ನು ಅರಿತುಕೊಂಡು ಎಲ್ಲರೊಂದಿಗೂ ಪ್ರೀತಿಯಿಂದ ಬಾಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾತ್ತದೆ.ಆಗ ನಾವು ಆಚರಿಸುವ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಡಾ| ರವಿಶಂಕರ್ ಸಿ.ಜಿ ಅಭಿಪ್ರಾಯ ಪಟ್ಟರು.ಅವರು ಖಿದ್ಮತ್ ಫೌಂಡೇಶನ್ ವಿಟ್ಲ ಇದರ ವತಿಯಿಂದ 75ನೇ ಸ್ವಾತಂತೋತ್ಸವದ ಪ್ರಯುಕ್ತ ವಿಟ್ಲ ಗಜಾನನ ಸಭಾ ಭವನದಲ್ಲಿ ನಡೆದ ಸ್ನೇಹಕೂಟ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ರವಿಶಂಕರ್ ಸಿ.ಜಿ. ರವರಿಗೆ ‘ಉದ್ಯಮ ಉತ್ತಮ ಸಮಾಜ ಸೇವೆ’ ಎಂಬ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ವಕ್ಪ್ ಸಲಹಾ ಸಮಿತಿ ದ.ಕ ಜಿಲ್ಲಾ ಸದಸ್ಯರಾಗಿ ಆಯ್ಕೆಯಾದ ಪ್ರಮುಖ ಧಾರ್ಮಿಕ ವಿದ್ವಾಂಸ ಸಿರಾಜುದ್ದೀನ್ ಸಖಾಫಿಯವನ್ನು ಸನ್ಮಾನಿಸಲಾಯಿತು.
ಖಿದ್ಮತ್ ಪೌಂಡೇಶನ್ ಉಪಾಧ್ಯಕ್ಷ ಖಾಸಿಂ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಫೌಂಡೇಶನ್ ಅಧ್ಯಕ್ಷರಾದ ಹಾಜಿ ಹಮೀದ್ ಕೊಡಂಗಾಯಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಸುದರ್ಶನ್ ಪಡಿಯಾರ್ , ವಿಟ್ಲ ವರ್ತಕರ ಸಂಘದ ಅಧ್ಯಕ್ಷ ಬಾಬು, ನ್ಯಾಯವಾದಿಗಳಾದ ಪದ್ಮನಾಭ ಪೂಜಾರಿ ಡಿ.ಬಿ ಅಬ್ದುಲ್ ಖಾದರ್ .ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಮನಾಥ ವಿಟ್ಲ, ಕೆಸಿಎಫ್ ರಾಷ್ಟ್ರೀಯ ನಾಯಕರಾದ ಇಬ್ರಾಹಿಂ ಬ್ರೈಟ್ ವಿಟ್ಲ,ಎಂ.ಕೆ ಮೂಸಾ,ವಿ.ಎಸ್ ಇಬ್ರಾಹಿಂ ,ಹಸೈನಾರ್ ಹಾಜಿ,ಜಾಪರ್ ಖಾನ್ ವಿಟ್ಲ,ಇಸ್ಮಾಯಿಲ್ ಮಾಸ್ಟರ್ ಮಂಗಿಳಪದವು,ಅಬ್ದುರ್ರಹ್ಮಾನ್ ಹಾಜಿ ಒಕ್ಕೆತ್ತೂರು,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು. ಖಿದ್ಮತ್ ಕಾರ್ಯದರ್ಶಿ ಸಲೀಂ ಬೈರಿಕಟ್ಟೆ ಸ್ವಾಗತಿಸಿ ವಂದಿಸಿದರು.