janadhvani

Kannada Online News Paper

ನೂರುಲ್ ಇಸ್ಲಾಂ ಮದರಸ ಮೂಡುಕರೆ, ಕಂದಾವರ- 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

ನೂರುಲ್ ಇಸ್ಲಾಂ ಮಸ್ಜಿದ್ ಮತ್ತು ಮದರಸ ಮೂಡುಕರೆ ಕಂದಾವರ ಇಲ್ಲಿ 75ನೇ ಸ್ವಾತಂತ್ರ್ಯವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಗೌರವಧ್ಯಕ್ಷರಾದ ಎಂ ಎಸ್ ಅಲಿಯಬ್ಬ ರವರು ಸಬೀಹ್ ಅಲಿ ಅವರಿಂದ ಗೌರವವಂದನೆಯನ್ನು ಸ್ವೀಕರಿಸಿ ಧ್ವಜಾರೋಹಣ ವನ್ನು ಮಾಡಿದರು. ಖತೀಬರಾದ ಮೊಹಮ್ಮದ್ ಕಾಸಿಂ ಸಅದಿ ಯವರು, ಭಾರತಕ್ಕೆ ಸ್ವಾತಂತ್ರ ಸಿಗಲು ನಮ್ಮ ಪೂರ್ವಜರ ತ್ಯಾಗ ಬಲಿದಾನದ ಬಗ್ಗೆ ವಿವರಿಸಿದರು.

ಯುವ ವಾಗ್ಮಿ ಇಮ್ರಾನ್ ಉಸ್ತಾದ್ ರವರು ಭಾರತದ ಮುಸ್ಲಿಮರ ದೇಶ ಪ್ರೇಮದ ಬಗ್ಗೆ ಮಾತಾಡಿದರು. ಅಧ್ಯಕ್ಷರಾದ ಎಂ ಎಸ್ ಅಬ್ದುಲ್ ಖಾದರ್ ಪ್ರದಾನ ಕಾರ್ಯದರ್ಶಿ ಶೇಕ್ ಮುಹಮ್ಮದ್, ಇಲಿಯಾಸ್ ಮೂಡುಕರೆ ಊರಿನ ಘಣ್ಯರು ಉಪಸ್ಥಿತರಿದ್ದರು.