janadhvani

Kannada Online News Paper

ಮುಸ್ಲಿಮರು ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿವಸ್ ಆಚರಿಸಲಿದ್ದಾರೆ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಈ ದೇಶದ ತ್ರಿವರ್ಣ ದ್ವಜವನ್ನು ವಿನ್ಯಾಸ ಗೊಳಿಸಿದ ಕೀರ್ತಿಯು ಸುರಯ್ಯ ತ್ಯಾಬ್ಜಿ ಎಂಬ ಮುಸ್ಲಿಮ್ ಮಹಿಳೆಗೆ ಸಲ್ಲಬೇಕು

ದೇಶವು 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಇದ್ದು, ಪ್ರತಿ ವರ್ಷದಂತೆ ಮುಸ್ಲಿಮರು ಸ್ವಾತಂತ್ರ್ಯೋತ್ಸವ ಆಚರಿಸಲಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ದೇಶದ ಮುಸ್ಲಿಮರು ಮಹತ್ವದ ಪಾತ್ರ ವಹಿಸಿದ್ದಾರೆ.

ಘಟಾನುಘಟಿ ಮುಸ್ಲಿಮರು ಬ್ರಿಟಿಷರ ವಿರುದ್ದ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ.ಈ ದೇಶದ ಸರ್ವ ಧರ್ಮದವರ ಸಾನಿಧ್ಯದಲ್ಲಿ ಅಂದು ಹೋರಾಟ ನಡೆದು, ತಮ್ಮ ದೇಶ ಪ್ರೇಮವನ್ನು ಮೆರೆದಿದ್ದಾರೆ.

ಈ ದೇಶದ ತ್ರಿವರ್ಣ ಧ್ವಜವನ್ನು ವಿನ್ಯಾಸ ಗೊಳಿಸಿದ ಕೀರ್ತಿಯು ಸುರಯ್ಯ ತ್ಯಾಬ್ಜಿ ಎಂಬ ಮುಸ್ಲಿಮ್ ಮಹಿಳೆಗೆ ಸಲ್ಲಬೇಕು. ಈ ದೇಶದ ಧ್ವಜ ಲಾಂಛನಕ್ಕಾಗಿ ಸುರಯ್ಯಾ ತ್ಯಾಬ್ಜಿ ಅವರು ಅಶೋಕ ಚಕ್ರವನ್ನು ಆಯ್ಕೆ ಮಾಡಿದರು.ಇದು ಅವರ ಮತೇತರ ಚಿಂತನೆಯನ್ನು ಪ್ರತಿಪಾದಿಸುತ್ತದೆ. ಈ ದೇಶದ ಮುಸ್ಲಿಮ್ ಸಾಮಾನ್ಯ ಜನತೆ, ಪ್ರತಿನಿಧಿಗಳು, ಸಂಸ್ಥೆಗಳು, ಸಂಘಟನೆಗಳು ಅಂದು ಪಡೆದ ಸ್ವಾತಂತ್ರ್ಯದ ಮಹತ್ವವನ್ನು ಅರಿತು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುತ್ತಾರೆ.

ಈ ದೇಶದ ಮುಸ್ಲಿಮರ ದೇಶಪ್ರೇಮವನ್ನು ಬಹುಷಃ ಹತ್ತಿರದಿಂದ ಬಲ್ಲವರಾಗಿದ್ದಾರೆ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು. ಪ್ರಧಾನಿ ನರೇಂದ್ರ ಮೋದಿಯವರು ಹರ್ ಘರ್ ಮೆ ತಿರಂಗಾ ಅಭಿಯಾನ ಘೋಷಿಸಿದ್ದು , ಈ ದೇಶದ ಮೇಲಿನ ಮುಸ್ಲಿಮರ ದೇಶ ಪ್ರೇಮವನ್ನು,ಸ್ವಾತಂತ್ರ್ಯ ದಿನಾಚರಣೆಯ ಮಾನದಂಡದ ಮೂಲಕ ಅಳೆಯಲು ಅಲ್ಲ , ಬದಲಾಗಿ ಈ ದೇಶದಲ್ಲಿ ತಿರಂಗಾ ಹೊರತಾದ ಇತರ ಧ್ವಜಗಳಲ್ಲಿ ಎಷ್ಟು ಜನರಿಗೆ ಆಸಕ್ತಿ ಇದೆ ಎಂಬ ವೀಕ್ಷಣೆಗಾಗಿ ಎಂದು ಆಲೋಚಿಸ ಬೇಕಿದೆ.

ಹಾಗೇನಿದ್ದರೂ,ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಯಶಸ್ವಿಯಾಗಲಿ ಎಂದು ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಹಾರೈಸಿದ್ದಾರೆ.