janadhvani

Kannada Online News Paper

ನಾರಾಯಣ ಗುರುಗಳು ಇದ್ದಿದ್ದರೆ ಮಸೂದ್, ಪ್ರವೀಣ್, ಫಾಝಿಲ್‌ ಗೃಹ ದರ್ಶನ ಮಾಡುತ್ತಿದ್ದರು- ಕೆ.ಅಶ್ರಫ್, ಮುಸ್ಲಿಮ್ ಒಕ್ಕೂಟ

ಇಂದು ಸಿಟಿ ರವಿ ಮದರಸದ ಬಗ್ಗೆ ಅಸಂಭದ್ದ ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚೆಗೆ ಸುಳ್ಯದ ಘಟನೆಯಿಂದ ಹಿಡಿದು ಸುರತ್ಕಲ್ ಹತ್ಯೆ ಯವರೆಗೆ, ಬೊಮ್ಮಾಯಿ ನೇತೃತ್ವದ ಸರ್ಕಾರ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಸಂರಕ್ಷಿಸುವ ನಿಟ್ಟಿನಲ್ಲಿ ಅನ್ಯಾಯವನ್ನೆ ಎಸಗಿದೆ.

ಮುಖ್ಯ ಮಂತ್ರಿ ಬೊಮ್ಮಾಯಿಯವರು ಮೃತ ಪ್ರವೀಣ್ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿ, ಸುಳ್ಯದ ಮಸೂದ್ ಮನೆಗೆ ಭೇಟಿ ನೀಡದೆ ಹಿಂತಿರುಗಿದ ಕಾರಣಕ್ಕಾಗಿಯೇ ಕ್ರಿಯೆಗೆ ಪ್ರತಿಕ್ರಿಯೆ ಖ್ಯಾತಿಯ ಮುಖ್ಯ ಮಂತ್ರಿ ನಡೆಯಿಂದಾಗಿ, ದುಷ್ಕರ್ಮಿಗಳು ನೈತಿಕವಾಗಿ ಮುಂದುವರಿದು ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನನ್ನು ಹತ್ಯೆ ಮಾಡುವ ಕೃತ್ಯಕ್ಕೆ ಮುಖ್ಯ ಮಂತ್ರಿಯವರು ಪರೋಕ್ಷ ಬೆಂಬಲ ನೀಡಿದರು.

ಪ್ರಸ್ತುತ ಘಟನೆಯನ್ನು ತೇಪೆ ಹಾಕಲು ಹೋಗಿ ಸರಕಾರ ಮುಜುಗರಕ್ಕೆ ಒಳಗಾಗಿದೆ. ಅದಕ್ಕೆಂದೇ ಸಿ.ಟಿ.ರವಿ ಪಶ್ಚಿಮದಿಂದ ಉದಯಿಸಿ ಮದರಸ ಚಟುವಟಿಕೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ. ಇಂದು ಬ್ರಹ್ಮಶ್ರೀ ನಾರಾಯಣ ಗುರುಗಳು ಇದ್ದಿದ್ದರೆ, ಮದರಸದಲ್ಲಿ ಬೋಧಿಸುತ್ತಿರುವ ಒಂದೇ ಮತ, ಒಂದೇಧರ್ಮ, ಒಂದೇ ದೇವರು ಎಂಬ ದಾರ್ಶನಿಕ ಸಿದ್ದಾಂತವನ್ನು ಬೆಂಬಲಿಸಿ, ಮಸೂದ್, ಪ್ರವೀಣ್, ಫಾಝಿಲ್ ಮನೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳುತ್ತಿದ್ದರು ಎಂಬುದನ್ನು ಸಿ.ಟಿ.ರವಿ ತಿಳಿದಿರಲಿ ಎಂದು ಕೆ.ಅಶ್ರಫ್ (ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.