ಮಂಗಳೂರು: ಇತ್ತೀಚೆಗೆ ಸುಳ್ಯದ ಕಲಂಜದಲ್ಲಿ ದುಷ್ಕರ್ಮಿ ಕೇಸರಿ ದಳಗಳು ಮಸೂದ್ ಎಂಬ ಮುಸ್ಲಿಮ್ ಯುವಕನೋರ್ವನನ್ನು ಮಾತುಕತೆಯ ನೆಪದಲ್ಲಿ ಕರೆದು ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮವಾಗಿ ಯುವಕ ಇಂದು ಮೃತ ಪಟ್ಟಿದ್ದು, ಕೇಸರಿ ದಳಗಳ ಈ ಕೃತ್ಯ ಕರ್ನಾಟಕದಲ್ಲಿನ ಗುಂಪು ಹತ್ಯೆಯ ಭಾಗವಾಗಿ ನಡೆದಂತಿದೆ. ಈ ಕೃತ್ಯವನ್ನು ದಕ್ಷಿಣ ಕನ್ನಡ ಮುಸ್ಲಿಂ ಒಕ್ಕೂಟವು ತೀವ್ರ ಖಂಡಿಸುತ್ತಿದೆ.
ಕಾನೂನನ್ನು ಕೈಗೆತ್ತು ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಸಂಘ ಪರಿವಾರದ ಮುಂದುವರಿದ ಭಾಗ ಎಂಬಂತೆ, ಮಸೂದ್ ನನ್ನು ಗುರಿ ಇಟ್ಟು ಪೂರ್ವ ಯೋಜಿತವಾಗಿ ಈ ಕೃತ್ಯವನ್ನು ಗುಂಪು ಹತ್ಯೆಯ ರೂಪದಲ್ಲಿಯೇ ನಡೆಸಲಾಗಿದೆ.
ಈ ಕೃತ್ಯದ ಅಪರಾಧಿಗಳನ್ನು ಬಂಧಿಸಿ,ಸರಕಾರ ಕಠಿಣ ಕಾನೂನು ಕ್ರಮದೊಂದಿಗೆ, ಸಂತ್ರಸ್ತ ಮಸೂದ್ ನ ಕುಟುಂಬಕ್ಕೆ ಪರಿಹಾರ ವಿತರಿಸಬೇಕು ಮತ್ತು ವಿರೋಧ ಪಕ್ಷ ಈ ಬಗ್ಗೆ ತೀವ್ರ ಒತ್ತಡ ತರಬೇಕಿದೆ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ರವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.







