janadhvani

Kannada Online News Paper

ಹಜ್‌ಗೆ ಸಿದ್ಧತೆ: ವಿದೇಶೀ ಉಮ್ರಾ ಯಾತ್ರಿಕರಿಗೆ ಶವ್ವಾಲ್ 30 ರ ವರೆಗೆ ಮಾತ್ರ ವೀಸಾ ಅನುಮತಿ

ಈ ಹಿಂದೆ ಶವ್ವಾಲ್ ಹದಿನೈದರ ವರೆಗೆ ಮಾತ್ರ ಅನುಮತಿ ಎಂದು ಘೋಷಿಸಲಾಗಿತ್ತು

ಮಕ್ಕತುಲ್ ಮುಕರ್ರಮಃ: ಮುಂಬರುವ ಹಜ್‌ಗೆ ಸಿದ್ಧತೆ ನಡೆಸುವ ಭಾಗವಾಗಿ ವಿದೇಶದಿಂದ ಆಗಮಿಸುವ ಉಮ್ರಾ ಯಾತ್ರಿಕರಿಗೆ ಶವ್ವಾಲ್ 30 ರವರೆಗೆ ಅವಕಾಶ ನೀಡಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ಪ್ರಕಟಿಸಿದೆ.

ಈ ಹಿಂದೆ ಘೋಷಿಸಲಾದ ಶವ್ವಾಲ್ ಹದಿನೈದು ಎಂಬುದರ ಬದಲಿಗೆ ಶವ್ವಾಲ್ 30 ರ ವರೆಗೆ ಎಂಬುದಾಗಿ ಹೊಸ ಘೋಷಣೆ ಬಂದಿದೆ. ಉಮ್ರಾಗೆ ವೀಸಾ ನೀಡುವುದನ್ನು ಇದೇ ತಿಂಗಳ 30 ರಿಂದ ಸ್ಥಗಿತಗೊಳಿಸಲಾಗುವುದು. ಆದಾಗ್ಯೂ, ದೇಶೀಯ ಯಾತ್ರಾರ್ಥಿಗಳಿಗೆ ದುಲ್ ಖಅದ್‌ನಲ್ಲಿ ಉಮ್ರಾ ಮಾಡಲು ಅವಕಾಶ ನೀಡಲಾಗುತ್ತದೆ.

ರಂಜಾನ್‌ನಲ್ಲಿ 66,94,998 ಮಂದಿಗೆ ಉಮ್ರಾ ಮಾಡಲು ಅವಕಾಶ ನೀಡಲಾಗಿದೆ. 2,62,781 ಮಂದಿ ಮದೀನಾದಲ್ಲಿ ರೌಳಾ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಸಚಿವಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿದ ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.