janadhvani

Kannada Online News Paper

ಹಿಜಾಬ್: ಯಷ್ಪಾಲ್ ಸುವರ್ಣ ತನ್ನ ತಾಕತ್ತು ಪ್ರದರ್ಶಿಸಲಿ- ಕೆ.ಅಶ್ರಫ್,ಮುಸ್ಲಿಮ್ ಒಕ್ಕೂಟ

ಶಾಲೆಯ ಸಮವಸ್ತ್ರದಂತಲ್ಲ ಸಾರ್ವಜನಿಕ ಸ್ಥಳಗಳಲ್ಲಿನ ಉಡುಪು ಎಂದು ಯಶಪಾಲರಿಗೆ ನೆನಪಿಸಿದ ಮಾಜಿ ಮೇಯರ್

ಮಂಗಳೂರು,ಏ.22: ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಹಾಕಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿ ಉಡುಪಿಯಲ್ಲಿ ಯಶ್ ಪಾಲ್ ಸುವರ್ಣ ತನ್ನ ಹರಕು ಮುರುಕು ಪಾಳೇಗಾರಿಕೆ ಮೆರೆಯಲು ಪ್ರಯತ್ನಿಸಿದ್ದಾನೆ.

ಈ ಹಿಂದೆ ಶಾಲೆಗಳ ಸಮವಸ್ತ್ರ ಸಂಬಂಧಿಸಿ ಮುಸ್ಲಿಮ್ ವಿಧ್ಯಾರ್ಥಿನಿಯರ ವಿಷಯದಲ್ಲಿ ನಡೆಸಿದ ಅವಾಂತರದಂತೆ ಅಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವ ಹಿಜಾಬ್ ವಿಷಯ, ಯಶ್ ಪಾಲ ತಿಳಿಯುವುದು ಒಳಿತು.

ಯಶ್ ಪಾಲ ಬಹುಶಃ ಬಾವಿಯ ಕಪ್ಪೆಯಂತೆ ಉಳಿದಿದ್ದಾನೆ. ಸಮುದ್ರ ವೀಕ್ಷಣೆ ಆಗಿಲ್ಲ. ಯಶ್ಪಾಲ್ ಸಾರ್ವಜನಿಕ ಸ್ಥಳದಲ್ಲಿ ಜನರ ಉಡುಪಿನ ಬಗ್ಗೆ ತನ್ನ ತಾಕತ್ತು ಪ್ರದರ್ಶಿಸಲಿ. ಸಾರ್ವಜನಿಕ ಸ್ಥಳಗಳಲ್ಲಿ ಉಡುಪು ಧರಿಸುವ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಪ್ರದರ್ಶನವಾಗಲಿ ಎಂದು ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಸವಾಲು ಹಾಕಿದ್ದಾರೆ.

ಹಿಜಾಬ್ ಧರಿಸಿದ ಕಾರಣಕ್ಕೆ ಉಡುಪಿಯಲ್ಲಿ ಪಿಯುಸಿ ಪರೀಕ್ಷೆ ಬರೆಯಲು ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಬಹಿಷ್ಕರಿಸಿ ಮನೆಗೆ ತೆರಳಿದ ವಿದ್ಯಾರ್ಥಿನಿಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಮುಖಂಡ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ “ಭವಿಷ್ಯದಲ್ಲಿ ಕಾಲೇಜುಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ಅನ್ನು ನಿಷೇಧಿಸಲಾಗುವುದು” ಎಂದು ಶುಕ್ರವಾರ ಹೇಳಿದ್ದರು.

error: Content is protected !! Not allowed copy content from janadhvani.com