janadhvani

Kannada Online News Paper

ದುಬೈ: ಮುಹಮ್ಮದ್ ಅಶ್ರಫ್ ಪಡೀಲ್ ಅವರ ಅಂತ್ಯಕ್ರಿಯೆಗೆ ಯುಒಇ ಅನಿವಾಸಿ ಕನ್ನಡಿಗರ ಒಕ್ಕೂಟ ನೆರವು

ದುಬೈ: ಮುಹಮ್ಮದ್ ಅಶ್ರಫ್ ಪಡೀಲ್ ರವರು ದಿನಾಂಕ 17/3/22 ರಂದು, ದುಬೈನಲ್ಲಿ ತಮ್ಮ ವಾಸ ಸ್ಥಳದಲ್ಲಿ ಹೃದಯಾಘಾತಗೊಂಡು ದುಬೈ ರಾಶಿದ್ ಆಸ್ಪತ್ರೆಗೆ ಕೊಂಡೋಯ್ಯುವ ದಾರಿ ಮಧ್ಯೆ ನಿಧನ ಹೊಂದಿದ್ದರು.

ವಿಷಯ ಅರಿತ ಅನಿವಾಸಿ ಕನ್ನಡಿಗರ ಒಕ್ಕೂಟ ಯು. ಎ. ಇ. ಇದರ ರಿಯಾಜ್ ಜೋಕಟ್ಟೆ ಅವರು ಜೊತೆಯಲ್ಲಿ ಸಾದಿಕ್, ನಾಸಿರ್, ಹಾಗೂ ಮೃತರ ಸಂಬಂಧಿಕರೊಂದಿಗೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಸರಿಪಡಿಸಿ ಹಾಗೂ ದಫನದ ವಿಧಿ ವಿಧಾನದೊಂದಿಗೆ ದಿನಾಂಕ 18/3/22 ದುಬೈ ಅಲ್ ಕೋಸ್ ಕಬರಸ್ತಾನದಲ್ಲಿ ದಫನ ಮಾಡಲಾಯಿತು.

ಸಂಬಂಧಿಕಾರಾದ ಕಲಂದರ್ ಶಾ, ಇರ್ಷಾದ್, ಮುಸ್ತಾಕ್, ಶಾಕಿರ್, ಇವರೆಲ್ಲರೂ ರಿಯಾಜ್ ಜೋಕಟ್ಟೆಯವರಿಗೆ ಸಹಕರಿಸಿದ್ದರು.ಮೃತರು ಪತ್ನಿ, 2 ಹೆಣ್ಣು 2 ಗಂಡು ಮಕ್ಕಳನ್ನು ಅಗಲಿರುವರು.