ಕಾಸರಗೋಡು-ಕುಂಬಳೆ: ಮುಹಿಮ್ಮಾತಿನಂತಹ ಧಾರ್ಮಿಕ ವಿದ್ಯಾಭ್ಯಾಸ ಸಂಸ್ಥೆಗಳು ಮುಂದಿಡುವ ಆಶಯಗಳು ವಿಶ್ವಕ್ಕೆ ಬೆಳಕು ಚೆಲ್ಲುವ ಶಾಂತಿಯ ಸಂದೇಶವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಹದಿನಾರನೇ ಉರೂಸ್ ಮುಬಾರಕ್ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸನದು ದಾನ ನಿರ್ವಹಿಸಿ ಅವರು ಮಾತನಾಡಿದರು.ಇಸ್ಲಾಂ ಶಾಂತಿ ಮತ್ತು ಸಮಾಧಾನದ ಧರ್ಮ. ಕೋಮುವಾದಕ್ಕೂ ಭಯೋತ್ಪಾದನೆಗೂ ಇಸ್ಲಾಮಿನಲ್ಲಿ ಸ್ಥಾನವಿಲ್ಲ. ಕೋಮುವಾದ ಎಬ್ಬಿಸುವ ನೂತನ ವಾದಿಗಳನ್ನು ಪ್ರತ್ಯೇಕಿಸಲು ವಿಶ್ವಾಸಿಗಳು ಯಾವಾಗಲೂ ಒಟ್ಟಾಗಿ ನಿಲ್ಲಬೇಕು. ಸಂಘನೆಗಳ ಚಿಕ್ಕ ಭಿನ್ನತೆಗಳು ಒಮ್ಮೆಯೂ ಐಕ್ಯತೆಗೆ ಧಕ್ಕೆಯಾಗಬಾರದು. ಸುನ್ನತ್ ಜಮಾಅತಿನ ಹಾದಿಯಲ್ಲಿ ಎಲ್ಲರೂ ಒಂದೇ ಮನಸ್ಸಿನಿಂದ ಕಾರ್ಯಾಚರಿಸಬೇಕು. ಧಾರ್ಮಿಕ ಸಮೂಹದ ವಿರುದ್ಧ ಬರುತ್ತಿರುವ ಯುಕ್ತಿ ವಾದಗಳನ್ನು ಮತ್ತು ನಿರೀಶ್ವರ ನಿರ್ಮಿತ ವಾದಗಳನ್ನು ವಿರೋಧಿಸಲು ಮುಹಿಮ್ಮಾತಿನಂಥಹ ಸಂಸ್ಥೆಗಳು ಯೋಗ್ಯವಾಗಿದೆ.ಏನೂ ಇಲ್ಲದ ಒಂದು ಪ್ರದೇಶದಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದ ಮುಹಿಮ್ಮಾತ್ ಬೆಳೆದು ದೃಢವಾದ ಜ್ಞಾನ ಗೋಪುರವಾಗಿ ನಿಂತಿರುವುದರ ಹಿಂದೆ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರ ಇಖ್’ಲಾಸ್ ಮತ್ತು ಆತ್ಮ ಸಮರ್ಪಣೆ ಎಂದು ಅವರು ಹೇಳಿದರು.ಇಹಲೋಕದ ಯಾವುದೇ ಉದ್ದೇಶಗಳಿಲ್ಲದೆ ಅಲ್ಲಾಹನ ಪ್ರೀತಿಯನ್ನು ಮಾತ್ರ ಉದ್ದೇಶವಿಟ್ಟುಕೊಂಡಾಗಿದೆ ತ್ವಾಹಿರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್ ಪ್ರಾರಂಭಿಸಿದ್ದು. ಇಂದು ಅದು ಅತೀ ಸುಂದರವಾದ ಜ್ಞಾನ ಕೇಂದ್ರವಾಗಿ ಮಾರ್ಪಟ್ಟಿದೆ. ಮುಹಿಮ್ಮಾತಿನ ಅಭಿವೃದ್ದಿಗಾಗಿ ಪ್ರಾರಂಭಿಸುತ್ತಿರುವ ಹೊಸ ಕ್ಯಾಂಪಸ್ ಜ್ಞಾನ ಸೇವಾ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಹೇಳಿದರು.
ಅಲ್ಲಾಹು ಗೌರವಿಸಿದವರನ್ನು ಗೌರವಿಸುವುದು ವಿಶ್ವಾಸಿಯ ಭಾಧ್ಯತೆಯಾಗಿದೆ. ಬರಾಅತ್ ದಿನದಂತಹ ಪುಣ್ಯ ತುಂಬಿದ ಶಅಬಾನ್ ತಿಂಗಳನ್ನು ಆಧ್ಯಾತ್ಮಿಕ ಅಭಿವೃದ್ದಿಗಾಗಿ ಉಪಯೋಗಿಸಬೇಕು ಎಂದು ಗ್ರ್ಯಾಂಡ್ ಮುಫ್ತಿ ಹೇಳಿದರು.
ಹಿಮಮಿ ಗಳಿಗೆ ಮತ್ತು ಹಾಫಿಳ್ ಗಳಿಗೆ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ರವರು ಸನದ್ ನೀಡಿದರು.
ಕೋಮುವಾದ ಎಬ್ಬಿಸುವ ನೂತನ ವಾದಿಗಳನ್ನು ಪ್ರತ್ಯೇಕಿಸಲು ವಿಶ್ವಾಸಿಗಳು ಯಾವಾಗಲೂ ಒಗ್ಗಟ್ಟಾಗಿ ನಿಲ್ಲಬೇಕು.