janadhvani

Kannada Online News Paper

ವಿದೇಶಿ ಕೆಲಸಗಾರರ ವಿರುದ್ದ ಸುಳ್ಳು ದೂರು ನೀಡುವವರ ವಿರುದ್ದ ಕಠಿಣ ಕ್ರಮ- ಸೌದಿ ಕಾರ್ಮಿಕ ಸಚಿವಾಲಯ

ರಿಯಾದ್: ಪ್ರಾಯೋಜಕ ಸುಳ್ಳು ದೂರು ನೀಡಿದ್ದಲ್ಲಿ, ಆತನ ಅನುಮತಿಯಿಲ್ಲದೆ ವಿದೇಶಿಯರಿಗೆ ತಮ್ಮ ಉದ್ಯೋಗವನ್ನು ಬದಲಿಸಬಹುದೆಂದು ಸೌದಿ ಕಾರ್ಮಿಕ ಸಚಿವಾಲಯ ತಿಳಿಸಿದೆ.ಕೆಲಸಗಾರ ಪಲಾಯಣಗೈದಿರುವುದಾಗಿ ಅಥವಾ ಕೆಲಸಕ್ಕೆ ಬಾರದಿರುವುದಾಗಿ ಸುಳ್ಳು ದೂರು ನೀಡಿದರೆ ಉದ್ಯೋಗದಾತನಿಂದ ಮುಕ್ತಿ ಪಡೆದು ಬೇರೆ ಉದ್ಯೋಗಕ್ಕೆ ಸೇರಬಹುದಾಗಿದೆ.

ವಿದೇಶಿ ಕೆಲಸಗಾರರ ವಿರುದ್ದ ಸುಳ್ಳು ದೂರು ದಾಖಲಿಸುವ ಖಾಸಗಿ ಸಂಸ್ಥೆಗಳು ಮತ್ತು ಉದ್ಯೋಗದಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಕಾರ್ಮಿಕ ಸಚಿವಾಲಯ ಎಚ್ಚರಿಸಿದೆ. ಇಂತಹ ಸ್ಥಾಪನೆಗಳ ವಿರುದ್ದ ಕಾರ್ಮಿಕ ಸಚಿವಾಲಯದ ಸೇವೆಗಳನ್ನು ಐದು ವರ್ಷಗಳ ವರೆಗೆ ನಿಷೇಧಿಸಲಾಗುವುದು.

ಇದಲ್ಲದೆ, ಈ ಮಾಲೀಕರ ಅಡಿಯಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಮತ್ತೊಂದು ಪ್ರಾಯೋಜಕರ ಹೆಸರಿನಲ್ಲಿ ವೃತ್ತಿ ಬದಲಾವಣೆಗಳನ್ನು ಮಾಡಬಹುದು. ಅದಕ್ಕೆ ಅಸ್ತಿತ್ವದಲ್ಲಿರುವ ಉದ್ಯೋಗದಾತನ ಅನುಮತಿಯ ಅಗತ್ಯವಿಲ್ಲ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಸತತ ಮೂರು ತಿಂಗಳು ವೇತನದ ಲಭಿಸದಿದ್ದಲ್ಲಿ, ಪ್ರಾಯೋಜಕರ ಅನುಮತಿಯಿಲ್ಲದೆ ವಿದೇಶಿಯರು ತಮ್ಮ ಉದ್ಯೋಗಗಳನ್ನು ಬದಲಾಯಿಸಬಹುದು.

ಇಖಾಮಾ ಕಾಲಾವಧಿ ಮುಗಿದಿದ್ದು, ನವೀಕರಿಸಲು ನಿರಾಕರಿಸುವ ಸಂದರ್ಭದಲ್ಲೂ ಉದ್ಯೋಗದಾತರ ಅನುಮತಿ ಇಲ್ಲದೆ ವಿದೇಶಿ ಕೆಲಸಗಾರರು ಇನ್ನೊಬ್ಬ ಉದ್ಯೋಗದಾತರ ಪ್ರಾಯೋಜಕತ್ವವನ್ನು ಪಡೆಯಬಹುದಾಗಿದೆ.

error: Content is protected !! Not allowed copy content from janadhvani.com