ಗುಜರಾತ್: ದೇಶವನ್ನು ಅಸ್ಥಿರಗೊಳಿಸುವ ಕ್ರಮಗಳನ್ನು ಸಂವಿಧಾನ ಬದ್ಧವಾಗಿ ವಿರೋಧಿಸಬೇಕು.ಅದಾಗಿದೆ ನೈಜ ನಾಗರಿಕ ಪ್ರಜ್ಞೆ. ಧರ್ಮ ಅಥವಾ ರಾಜಕೀಯದ ಹೆಸರಿನಲ್ಲಿ ಜನರನ್ನು ವಿಭಜಿಸುವ ಯಾವುದೇ ಪ್ರಯತ್ನವನ್ನು ವಿರೋಧಿಸುವ ಶಕ್ತಿ ಭಾರತದ ಸಂವಿಧಾನಕ್ಕಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಹಿಂಸೆ ಮತ್ತು ಭ್ರಷ್ಟಾಚಾರದಿಂದ ಸಾಧಿಸಿದ ಯಾವುದೇ ಯಶಸ್ಸು ಕೇವಲ ತಾತ್ಕಾಲಿಕ. ಸರ್ಕಾರಗಳು ಸಂವಾದದ ಮೂಲಕ ಜನರ ಆಶೋತ್ತರಗಳನ್ನು ಮುಟ್ಟಬೇಕೇ ಹೊರತು ದಮನದಿಂದಲ್ಲ ಎಂದು ಕಾಂತಪುರಂ ಹೇಳಿದರು. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆದ ಎಸ್‌ಎಸ್‌ಎಫ್ ರಾಷ್ಟ್ರೀಯ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡತ್ತಿದ್ದರು.
ಫೆ.22 ರಿಂದ ಪ್ರಾರಂಭಗೊಂಡ ಎಸ್ಸೆಸ್ಸೆಫ್ ರಾಷ್ಟ್ರೀಯ ಸಾಹಿತ್ಯೋತ್ಸವವು ಗುಜರಾತಿನ ರಾಜ್‌ಕೋಟ್ ಸಮಾಪ್ತಿ ಗೊಂಡಿತು. ದೇಶದ 24 ರಾಜ್ಯಗಳು ಈ ಸಾಹಿತ್ಯೋತ್ಸವ್‌ನಲ್ಲಿ ಭಾಗಿಯಾಗಿತ್ತು. ವಿವಿಧ ಅಕಾಡೆಮಿಕ್ ಚರ್ಚೆಗಳು, ಸಾಹಿತ್ಯ ಸಂವಾದಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳೊಂದಿಗೆ ಸಂಪನ್ನವಾದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪ್ರೊಫೆಸರ್ ಅಖ್ತರ್ ವಾಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಇಪ್ಪತ್ತನಾಲ್ಕು ರಾಜ್ಯಗಳು ಭಾಗವಹಿಸಿದ ದೇಶದ ಸುನ್ನಿ ವಿದ್ಯಾರ್ಥಿಗಳ ಅತೀ ದೊಡ್ದ ಸ್ಪರ್ಧೆಯಲ್ಲಿ ಉತ್ತಮ ಸಾಧನೆಯನ್ನು ತೋರ್ಪಡಿಸಿ, ಚೊಚ್ಚಲ ಸಾಹಿತ್ಯ ಕಿರೀಟವನ್ನು ಕಾಶ್ಮೀರ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಕರ್ನಾಟಕ ಹಾಗೂ ತೃತೀಯ ಸ್ಥಾನವನ್ನು ಕೇರಳ ಅಲಂಕರಿಸಿತು.







