janadhvani

Kannada Online News Paper

ಹೆಣ್ಮಕ್ಕಳ ಶಿಕ್ಷಣಕ್ಕೆ ಅಡ್ಡಿ, ಕೋರ್ಟ್ ತೀರ್ಪಿನ ದುರ್ಬಳಕೆ- ಫೆ.23 ಕ್ಕೆ ರಾಜ್ಯಾದ್ಯಂತ ಎಸ್ಸೆಸ್ಸೆಫ್ ಪ್ರತಿಭಟನೆ

ಹಿಜಾಬ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ/ಶಿಕ್ಷಕಿಯರಿಗೆ ಮಾನಸಿಕ ಹಿಂಸೆ: ಎಸ್ಸೆಸ್ಸೆಫ್ ನಿಂದ ಪ್ರತಿಭಟನೆ

ಮಂಗಳೂರು: ಹಿಜಾಬ್ ಸಂಬಂಧಿತ ಪ್ರಕರಣದಲ್ಲಿ ರಾಜ್ಯ ಹೈ ಕೋರ್ಟ್ ನ ಮಧ್ಯಂತರ ಆದೇಶವನ್ನು ದುರುಪಯೋಗ ಪಡಿಸುವ ಮೂಲಕ ಹೆಣ್ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವ ಪ್ರಸಂಗಗಳು ಅಲ್ಪಸಂಖ್ಯಾತ ಇಲಾಖೆ ಸಂಸ್ಥೆಗಳು ಸಹಿತ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳಲ್ಲಿ ನಡೆದಿದೆ.

ಇದನ್ನು ಖಂಡಿಸಿ ರಾಜ್ಯಾದ್ಯಂತ ಫೆ.23 ರ ಬುಧವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎಸ್ಸೆಸ್ಸೆಫ್ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ ಹಾಗೂ ಪ್ರ.ಕಾರ್ಯದರ್ಶಿ ಇಸ್ಮಾ‌ಈಲ್ ಮಾಸ್ಟರ್ ಮೊಂಟೆಪದವು ಪತ್ರಿಕಾಪ್ರಕಟನೆಯಲ್ಲಿ ತಿಳಿಸಿದ್ದಾರೆ.