ದುಬೈ :ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಯುಎಇ ಆಯೋಜಿಸುತ್ತಿರುವಂತಹ ನ್ಯಾಷನಲ್ ಪ್ರತಿಭೋತ್ಸವ-2022 ಫೆಬ್ರವರಿ 20 ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಇಂಡಿಯನ್ ಅಕಾಡೆಮಿ ಸ್ಕೂಲ್ ಸಭಾಂಗಣ ಕಿಸೈಸ್, ದುಬೈ ಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಗಲ್ಫ್ ನಾದ್ಯಂತ ಕನ್ನಡ ಕಲಿಸುವ ನಮ್ಮ ಕನ್ನಡ ಕಲಿಕೆ ಪ್ರಾರಂಭೋತ್ಸವಕ್ಕೆ ಪದ್ಮ ಶ್ರೀ ಹರೇಕಳ ಹಾಜಬ್ಬ ಚಾಲನೆ ನೀಡಲಿದ್ದಾರೆ.
ನಾಲ್ಕು ವೇದಿಕೆಗಳಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಯುಎಇ ಯ ಏಳು ಎಮಿರೇಟ್ಸ್ ಗಳಿಂದ 300 ಕ್ಕೂ ಅಧಿಕ ಕನ್ನಡಿಗ ಪ್ರತಿಭೆಗಳು 88 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ ಕೆಸಿಎಫ್ ಕಾರ್ಯಕರ್ತರು ವಿದ್ಯಾರ್ಥಿಗಳು ಮತ್ತು 200 ರಷ್ಟುಕುಟುಂಬಗಳು ಪಾಲ್ಗೊಳ್ಳಲಿರುವ ಪ್ರತಿಭೋತ್ಸವದಲ್ಲಿ ಮಹಿಳೆಯರಿಗೆ ಪುಡ್ಡಿಂಗ್, ಬೆಸ್ಟ್ ಔಟ್ ಆಫ್ ವೇಸ್ಟ್, ರಸಪ್ರಶ್ನೆ ವಿಭಾಗಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ನಡೆಯುವ ಇನ್ಸೆಫ್ಷನ್ ಸಮಾರಂಭದಲ್ಲಿ ಪ್ರತಿಭೋತ್ಸವ ಸ್ವಾಗತ ಸಮಿತಿ ಛೇರ್ಮನ್ ಸಯ್ಯದ್ ಮಖ್ಡೂಮ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಯ್ಯದ್ ಸಿಟಿಎಂ ಉಮರ್ ಅಸ್ಸಖಾಫ್ (ಮನ್ಶರ್ ತಂಙಳ್) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಬ್ದುಲ್ ಹಮೀದ್ ಸಅದಿ (FC, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ ), ಇಬ್ರಾಹಿಂ ಗಡಿಯಾರ್ (ಸಿಇಓ, ಅನ್ಮೋಲ್ ಫೈಲಿಂಗ್ ಅಂಡ್ ಸ್ಟೀಲ್ ದುಬೈ), ಅಶ್ರಫ್ ಷಾ ನಂತೂರ್ (ಎಂ ಡಿ ಖರೀಯತ್ ಅಲ್ ಶಂಸ್ ಕಾಂಟ್ರಾಕ್ಟಿಂಗ್), ಅಸ್ಲಮ್ ಹಾಜಿ ಚೊಕ್ಲಿ, ಅಬ್ದುಲ್ ಸಮದ್ ನಾಗೂರ್ (ಅಲ್ ಮಝಾರ್ ಮೆಟಲ್ ಅಂಡ್ ಎಲ್ಕ್ಟ್ರೋಪ್ಲೇಟಿಂಗ್), ಅಬ್ದುಲ್ ಹಮೀದ್ ಪಿಎಂಹೆಚ್ (ಅಧ್ಯಕ್ಷರು ಸಂಘಟನಾ ವಿಭಾಗ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ), ಉಸ್ಮಾನ್ ಹಾಜಿ ನಾಪೋಕ್ಲು (ಇಶಾರಾ ಕೋಆರ್ಡಿನೇಟರ್, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕೆಸಿಎಫ್ ಯುಎಇ ಶಿಕ್ಷಣ ವಿಭಾಗದ ಕಾರ್ಯದರ್ಶಿ ಶಾಹುಲ್ ಹಮೀದ್ ಸಖಾಫಿ ಮಾದಾಪುರ ಸ್ವಾಗತ ಮತ್ತು ಸ್ವಾಗತ ಸಮಿತಿ ಕನ್ವೀನರ್ ಲತೀಫ್ ತಿಂಗಳಾಡಿ ವಂದಿಸಲಿದ್ದಾರೆ.
ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಎಮ್ಮೆಮಾಡು ರವರ ಅಧ್ಯಕ್ಷತೆಯನ್ನು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯದ್ ತ್ವಾಹ ಅಲ್ ಬಾಫಕಿ ತಂಙಳ್ (ಅಧ್ಯಕ್ಷರು, ಜಾಮಿಯಾ ಸಅದಿಯಾ ಯುಎಇ) ದುಆ ನೇತೃತ್ವ ನೀಡಲಿದೆ. ಯು.ಟಿ. ಖಾದರ್ ಮಂಗಳೂರು (ಕರ್ನಾಟಕ ವಿಧಾನಸಭೆಯ ಉಪನಾಯಕ, ವಿರೋಧ ಪಕ್ಷ) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಿಕ್ಷಣ ಕ್ರಾಂತಿಯ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಶಾರ್ಜಾ ವಿಶ್ವವಿದ್ಯಾಲಯದಿಂದ ಅರೇಬಿಕ್ ಸಾಹಿತ್ಯಕ್ಕಾಗಿ 2022ನೇ ಸಾಲಿನ ಪಿಎಚ್ಡಿ ಪ್ರಥಮ ಶ್ರೇಯಾಂಕ ಪಡೆದ ಅಹ್ಮದ್ ಮುಷ್ತಾಕ್ ಅಬ್ದುಲ್ ಖಾದರ್ ರವರುಗಳನ್ನು ಸನ್ಮಾನ ಮಾಡಲಾಗುವುದು.
ಶೈಖ್ ಸಲಾ ಮೂಸಾ ಅಲ್ ಮದನಿ ದುಬೈ, ಬಿ ಎಂ ಮುಮ್ತಾಝ್ ಕೃಷ್ಣಾಪುರ (ಉಪಾಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್), ಅಬೂಸ್ವಾಲಿ ಹಾಜಿ (ನಫೀಸ್ ಗ್ರೂಪ್ ದುಬೈ), ರೊನಾಲ್ಡ್ ಮಾರ್ಟಿಸ್ (ಬ್ಲೂ ರಾಯಲ್ ಗ್ರೂಪ್), ಮುಹಮ್ಮದ್ ಅಲಿ ಜರ್ವಾನ್ (ಎಂ ಡಿ ಸುಲ್ತಾನ್ ಬುಲ್ಲಿಯನ್ ಗೋಲ್ಡ್), ಮುಹಮ್ಮದ್ ಶಾನಿದ್ (ಜುಮಾ ಮಾಹಿರಿ ಗ್ರೂಪ್), ಅಶ್ರಫ್ ಷಾ ಮಂತೂರ್ (ಖೈರಿಯತ್ ಅಲ್ ಶಮ್ಸ್) ಸಲೀಂ ಸೂಫಿ ಖಾನ್ (ಜುವೆಲ್ ಹೌಸ್), ಡಾ ಯೂಸುಫ್ (ಅಧ್ಯಕ್ಷರು ಬಿಸಿಎಫ್ ದುಬೈ), ಅಬ್ದುಲ್ಲಾ ಮದುಮೂಲೆ (ಝಾಯಿದ್ ಫೌಂಡೇಷನ್ ಅಬುಧಾಬಿ), ಇಬ್ರಾಹಿಂ ಗಡಿಯಾರ್ (ಅಬ್ದುಲ್ ನಾಸರ್ ತಾಯಲ್ , ಮುಹಮ್ಮದ್ ಹಾಜಿ ಕುಕ್ಕುವಳ್ಳಿ, ರಫೀಕ್ ಪಿ ಕೆ, ರಾಝಿಕ್ ಉಳ್ಳಾಲ, ರಫೀಕ್ ಪಿಕೆ, ಮುಹಮ್ಮದ್ ಅಲಿ ಉಚ್ಚಿಲ, ಡಾ ಕಾಪು ಮುಹಮ್ಮದ್, ಹಿದಾಯತ್ ಅಡ್ಡೂರ್ ಸೇರಿದಂತೆ ಹಲವು ಖ್ಯಾತ ಉದ್ಯಮಿಗಳು, ಸಾಂಘಿಕ ನಾಯಕರುಗಳು, ಸಾಮಾಜಿಕ ನೇತಾರರುಗಳು ಭಾಗವಹಿಸಲಿದ್ದಾರೆ.
2013 ಫೆಬ್ರವರಿ 13 ರಂದು ಮಾಯಾನಗರಿ ದುಬೈ ಯಲ್ಲಿ ಜನ್ಮ ತಾಳಿದ ಜನ್ಮತಾಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ 15000 ಕ್ಕೂ ಮಿಕ್ಕ ಕನ್ನಡಿಗ ಸದಸ್ಯರನ್ನೊಳಗೊಂಡು ಅರಬ್ ರಾಷ್ಟ್ರಗಳು ಮತ್ತು ಮಲೇಷ್ಯಾ ಲಂಡನ್ ನಲ್ಲಿ ಕಾರ್ಯಾಚರಿಸುತ್ತಿದೆ. ಹಲವಾರು ಸಾಮಾಜಿಕ, ಶೆಕ್ಷಣಿಕ, ಸಾಮುದಾಯಿಕ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಕೆ.ಸಿ.ಎಫ್ ನಿರಾಶ್ರಿತರಿಗೆ ಆಶ್ರಯ ಯೋಜನೆ, ಬಡವರ ಕಲ್ಯಾಣ ಯೋಜನೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಉತ್ತರ ಕರ್ನಾಕದಲ್ಲಿ ಉಚಿತ ಶಿಕ್ಷಣ ಸಂಸ್ಥೆಗಳು ಮೊದಲಾದ ಜನಪರ ಸೇವೆಗಳನ್ನುಮಾಡುತ್ತಾ ಬರುತ್ತಿದೆ. ಗಲ್ಫ್ ರಾಷ್ಟ್ರದಲ್ಲಿ ಅಲ್ಲಿನ ಸರಕಾರದ ಅನುಮೋದನೆಯೊಂದಿಗೆ ಮೊತ್ತ ಮೊದಲ ಬಾರಿಗೆ ಗಲ್ಫ್ ಇಶಾರ ಕನ್ನಡ ಮಾಸಿಕವು ಬಿಡುಗಡೆಗೊಳಿಸಿ ಪ್ರತಿಯೊಬ್ಬಅನಿವಾಸಿ ಕನ್ನಡಿಗನ ಮನೆ ಬಾಗಿಲಿಗೆ ತಲುಪುತ್ತಿದೆ. ಇದು ವಿದೇಶ ರಾಷ್ಟ್ರಗಳಲ್ಲಿ ಕೆಸಿಎಫ್ ಕನ್ನಡ ಭಾಷೆ, ಜಲ, ನೆಲ, ಸಂಸ್ಕೃತಿಗೆ ನೀಡುವ ಗೌರವವಾಗಿರುತ್ತದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮೊದಲಾದ ಭಾರತದ ರಾಷ್ಟ್ರೀಯ ದಿನಗಳನ್ನು ವಿವಿಧ ಎಮಿರೇಟ್ಸ್ ಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರನ್ನುಸೇರಿಸಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.
ಅನಿವಾಸಿ ಕನ್ನಡಿಗರ ಪಾಲಿಗೆ ಆಶಾಕಿರಣವಾಗಿ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಊರಿಗೆ ತೆರಳಲು ಸಂದಿಗ್ದ ಪರಿಸ್ಥಿತಿಯಲ್ಲಿ ಎಂಟಕ್ಕಿಂತ ಹೆಚ್ಚು ಚಾರ್ಟೆಡ್ ವಿಮಾನ ವ್ಯವಸ್ಥೆ, ಕಿಟ್ ವಿತರಣೆ, ದುಬೈ ಪೊಲೀಸ್ ಸಹಯೋಗದಲ್ಲಿ ಸ್ವಯಂ ಸೇವಕ ವ್ಯವಸ್ಥೆ, ವೀಸಾ, ಪಾಸ್ಪೋರ್ಟ್ ಸಮಸ್ಯೆಗಳಿಂದ ಊರಿನ ದಾರಿಯೇ ಕಮರಿ ಹೋದ ಅದೆಷ್ಟೋ ಪ್ರವಾಸಿಗಳಿಗೆ ಜಾತಿ ಧರ್ಮ ನೋಡದೆ ಕಾನೂನು ರೀತಿಯ ಸಹಾಯ ಮಾಡಿ ಕೊಟ್ಟು ಅವರನ್ನು ಊರಿಗೆ ಕಳುಹಿಸಿಕೊಟ್ಟು ಸಹಕರಿಸುತ್ತಿದೆ. ಚಿಕ್ಕ ಪುಟ್ಟ ಕಾರಣಗಳಿಂದ ಜೈಲು ಸೇರಿದ ಅಮಾಯಕರನ್ನು ಬಿಡುಗಡೆಗೊಳಿಸಿ ಅವರ ಕುಟುಂಬದ ಕಣ್ಣೀರು ಒರೆಸಿಕೊಟ್ಟಿದೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ರೋಗಿಗಳನ್ನುಕಂಡು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿ ಕೊಟ್ಟು ಅವರನ್ನು ಕುಟುಂಬಕ್ಕೆ ತಲುಪಿಸಿಕೊಟ್ಟಿದೆ. ವಿದೇಶ ರಾಷ್ಟ್ರಗಳಲ್ಲಿ ಅಫಘಾತದಿಂದ ಮರಣ ಹೊಂದಿದ ಕುಟುಂಬಗಳಿಗೆ ಸಂತ್ವಾನವನ್ನು ಮಾಡಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಅವರ ಕಣ್ಣೀರು ಒರೆಸುವಂತಹ ಕೆಲಸಗಳನ್ನು ಮಾಡುತ್ತಿದೆ.
ಯುಎಇ ಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದೆ.
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದವರು
1. ಸಯ್ಯದ್ ಮಕ್ದೂಂ (ಛೈರ್ಮಾನ್, ಸ್ವಾಗತ ಸಮಿತಿ)
2. ಮೂಸಾ ಹಾಜಿ ಬಸರ (ಪ್ರಧಾನ ಕಾರ್ಯದರ್ಶಿ, ಕೆಸಿಎಫ್ ಯುಎಇ)
3. ಲತೀಫ್ ತಿಂಗಳಾಡಿ (ಕನ್ವೀನರ್, ಸ್ವಾಗತ ಸಮಿತಿ)
4. ಖಾದರ್ ಸಾಲೆತ್ತೂರು (ಕೋಶಾಧಿಕಾರಿ, ಸ್ವಾಗತ ಸಮಿತಿ)
5. ಶಾಹುಲ್ ಹಮೀದ್ ಸಖಾಫಿ ಮಾದಾಪುರ (ಕಾರ್ಯದರ್ಶಿ, ಶಿಕ್ಷಣ ವಿಭಾಗ ಕೆಸಿಎಫ್ ಯುಎಇ)
6. ಝೈನುದ್ದೀನ್ ಹಾಜಿ ಬೆಳ್ಳಾರೆ (ಛೈರ್ಮಾನ್, ವೆಲ್ಫೇರ್ ವಿಭಾಗ ಕೆಸಿಎಫ್ ಯುಎಇ)
7. ಇಕ್ಬಾಲ್ ಕಾಜೂರು (ಛೈರ್ಮಾನ್, ಸಂಘಟನಾ ವಿಭಾಗ ಕೆಸಿಎಫ್ ಯುಎಇ)
8. ಅಶ್ರಫ್ ಹಾಜಿ ಅಡ್ಯಾರ್








