janadhvani

Kannada Online News Paper

ಕರ್ನಾಟಕದಲ್ಲಿ ಹಿಜಾಬ್‌ಗೆ ತಡೆ- ಕುವೈತ್ ಮಹಿಳೆಯರಿಂದ ಭಾರತಕ್ಕೆ ಸಂದೇಶ

ಭಾರತ-ಕುವೈತ್ ಸಂಬಂಧಗಳು ಪ್ರಾಚೀನ ಕಾಲದಿಂದಲೂ ಇವೆ. ಕುವೈತ್‌ನಲ್ಲಿ ವಿಶೇಷವಾಗಿ ವ್ಯಾಪಾರ ಸಹಕಾರದಲ್ಲಿ ಭಾರತೀಯ ಅತಿ ದೊಡ್ಡ ವಲಸಿಗ ಸಮುದಾಯವಾಗಿದೆ.ನಾವು ಭಾರತೀಯ ಸಮುದಾಯವನ್ನು ಗೌರವಿಸುತ್ತೇವೆ.

ಕುವೈತ್ ಸಿಟಿ | ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಶಿರ ವಸ್ತ್ರವನ್ನು ನಿಷೇಧಿಸಿರುವುದನ್ನು ಖಂಡಿಸಿ ಕುವೈತ್ ನ ಭಾರತೀಯ ರಾಯಭಾರಿ ಕಚೇರಿ ಮುಂಭಾಗದಲ್ಲಿ ಕುವೈತ್ ನ ಸರ್ವ ಧರ್ಮೀಯರು ಒಗ್ಗಟ್ಟಾಗಿ ಪ್ರತಿಭಟನೆ ನಡೆಸಿದರು. ಇಸ್ಲಾಮಿಕ್ ಸಾಂವಿಧಾನಿಕ ಚಳವಳಿಯ (ಹದಾಫ್) ಮಹಿಳೆಯರು ಪ್ರತಿಭಟನೆಯನ್ನು ಆಯೋಜಿಸಿದ್ದರು.

ಹಲವಾರು ಸ್ಥಳೀಯ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಅಲ್-ಕಬಾಸ್ ದಿನಪತ್ರಿಕೆ ವರದಿ ಮಾಡಿದೆ. ಭಾರತೀಯ ರಾಯಭಾರಿ ಕಚೇರಿಯ ಮುಂಭಾಗದಲ್ಲಿರುವ ಗ್ರೀನ್ ಐಲ್ಯಾಂಡ್ ಸ್ಟ್ಯಾಂಡ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಮ್ಮ ಧ್ವನಿ ಮತ್ತು ಸಂದೇಶವನ್ನು ಭಾರತ ಸರ್ಕಾರಕ್ಕೆ ತಲುಪಿಸುವಂತೆ ಅವರು ಒತ್ತಾಯಿಸಿದರು.

ಭಾರತ-ಕುವೈತ್ ಸಂಬಂಧಗಳು ಪ್ರಾಚೀನ ಕಾಲದಿಂದಲೂ ಇವೆ. ಕುವೈತ್‌ನಲ್ಲಿ ವಿಶೇಷವಾಗಿ ವ್ಯಾಪಾರ ಸಹಕಾರದಲ್ಲಿ ಭಾರತೀಯ ಅತಿ ದೊಡ್ಡ ವಲಸಿಗ ಸಮುದಾಯವಾಗಿದೆ.ನಾವು ಭಾರತೀಯ ಸಮುದಾಯವನ್ನು ಗೌರವಿಸುತ್ತೇವೆ.ಅವರಲ್ಲಿ ಮುಸ್ಲಿಮೇತರೂ ಬಹಳಷ್ಟಿದ್ದಾರೆ. ಆದರೆ ನಾವು ಅವರನ್ನು ಇಸ್ಲಾಮಿಕ್ ಸಂಪ್ರದಾಯಗಳು ಮತ್ತು ನಂಬಿಕೆಗಳನ್ನು ಅನುಸರಿಸಲು ಒತ್ತಾಯಿಸುವುದಿಲ್ಲ. ಇಲ್ಲಿ ಅವರು ತಮ್ಮ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ಆಚರಿಸಲು ಸ್ವತಂತ್ರರು.

ಅದೇ ರೀತಿ ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಮುಸ್ಲಿಮರಿಗೆ ಮತ್ತು ಅವರ ಆಚರಣೆಗಳಿಗೆ ಪರಸ್ಪರ ಗೌರವ ಮತ್ತು ಸಹಕಾರವನ್ನು ನೀಡುವಂತೆ ಪ್ರತಿಭಟನಾಕಾರರು ಭಾರತ ಸರ್ಕಾರವನ್ನು ಒತ್ತಾಯಿಸಿದರು.