janadhvani

Kannada Online News Paper

ಕನ್ನಡ ಮಾಧ್ಯಮಗಳ ಅತಿರೇಕದ ವರ್ತನೆ ಖಂಡನೀಯ : ಎಸ್ಸೆಸ್ಸೆಫ್

ಹಿಜಾಬ್ ವಿಷಯದಲ್ಲಿ ರಾಜ್ಯದ ಕೆಲವು ಮಾದ್ಯಮಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿರುವುದು ಕೂಡ ಖಂಡನೀಯ

ಮಂಗಳೂರು : ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯನ್ನು ಆರೋಪಿಯಂತೆ ಅಟ್ಟಾಡಿಸಿ ವೀಡಿಯೋ ಮಾಡಿ ಅವಮಾನ ಮಾಡಿದ ಮಾಧ್ಯಮವೊಂದರ ವರದಿಗಾರನ ಅತಿರೇಕದ ವರ್ತನೆ ಖೇದಕರವಾಗಿದ್ದು. ಇದೇ ರೀತಿ ಹಿಜಾಬ್ ವಿಷಯದಲ್ಲಿ ರಾಜ್ಯದ ಕೆಲವು ಮಾಧ್ಯಮಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿರುವುದು ಕೂಡ ಖಂಡನೀಯ ಎಂದು ಎಸ್ಸೆಸ್ಸೆಫ್ ಸೆಕ್ರೇಟರಿಯೇಟ್ ತಿಳಿಸಿತು.

ವಸ್ತುನಿಷ್ಠ ವರದಿಗಳ ಮೂಲಕ ನಾಡಿನ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕಾಗಿರುವುದು ಮಾದ್ಯಮ ಧರ್ಮವಾಗಿದ್ದು ಅದಕ್ಕೆ ವಿರುದ್ಧವಾಗಿ ಬೇಕಾಬಿಟ್ಟಿ ವರದಿ ಪ್ರಕಟಿಸುವ ಮಾಧ್ಯಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತು.

ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳೂರು, ಕೋಶಾಧಿಕಾರಿ ಹಾಫಿಝ್ ಸುಫ್ಯಾನ್ ಸಖಾಫಿ, ಸಫ್ವಾನ್ ಚಿಕ್ಕಮಗಳೂರು, ರವೂಫ್ ಖಾನ್ ಉಡುಪಿ, ರಹೀಂ ಕಾರ್ಕಳ, ಮುನೀರ್ ಸಖಾಫಿ ಉಳ್ಳಾಲ, ಶರೀಫ್ ಕೊಡಗು ಉಪಸ್ಥಿತರಿದ್ದರು.