janadhvani

Kannada Online News Paper

ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ವತಿಯಿಂದ ಬೃಹತ್ ರಕ್ತದಾನ ಶಿಬಿರ

ಕತಾರ್: ಆಝಾದೀ ಕಾ ಅಮೃತ್ ಮಹೋತ್ಸವ್ ಹಾಗೂ ಕತಾರ್ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ, ದಿನಾಂಕ 12-02-2022 ನೇ ಶುಕ್ರವಾರ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನಿಂದ, ಹಮದ್ ಮೆಡಿಕಲ್ ಕಾರ್ಪೊರೇಷನ್ ನ ಸಹಯೋಗದೊಂದಿಗೆ, ಹಮದ್ ಆಸ್ಪತ್ರೆಯಲ್ಲಿರುವ ರಕ್ತದಾನ ಕೇಂದ್ರದಲ್ಲಿ, ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಘನತೆವೆಕ್ತ ಭಾರತೀಯ ರಾಯಭಾರಿ, ಡಾಕ್ಟರ್ ದೀಪಕ್ ಮಿತ್ತಲ್ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದರು.ರಕ್ತದಾನವು ಎಲ್ಲಕ್ಕಿಂತಲೂ ಮೇಲು. ರಕ್ತದಾನ ಮಾಡಲು ಪ್ರತಿಯೊಬ್ಬರೂ ಮುಂದೆ ಬರಬೇಕೆಂದು ಹೇಳುತ್ತಾ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಇಂತಹ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ
ಉದಾತ್ತ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಅತಿಥಿಗಳಾಗಿ ಆಗಮಿಸಿದ್ದ, ಹಮದ್ ಮೆಡಿಕಲ್ ಕಾರ್ಪೋರೇಷನ್ PHCC, ರಾವ್ದತ್ ಅಲ್ ಖೈಲ್ ನ ಖ್ಯಾತ ವೈದ್ಯರಾದ ಡಾಕ್ಟರ್ ಅಮಿತ್ ವರ್ಮಾ, (Specialist in Family medicine and Dualities), ಹಮದ್ ಮೆಡಿಕಲ್ ಆಸ್ಪತ್ರೆಯಲ್ಲಿ ಸೋಂಕು ನಿಯಂತ್ರಣಾ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಮೊಹಮ್ಮದ್ ರಹಮತ್ ಉಲ್ಲಾ ಶಫೀಖ್ ಮತ್ತು ಹಮದ್ ಮೆಡಿಕಲ್ ಕಾರ್ಪೋರೇಷನ್ PHCC, ಅಲ್ ವಜ್ಬಾ ದ ಡಾಕ್ಟರ್ ಬ್ರಿಯಾನ್ ಡೇವಿಡ್ ಓಕುಮು, ರಕ್ತದಾನದ ಮಹತ್ವ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ಸವಿಸ್ತಾರವಾಗಿ ವಿವರಿಸಿ, ರಕ್ತದಾನಿಗಳನ್ನು ಹುರಿದುಂಬಿಸಿದರು.

QISF ಅಧ್ಯಕ್ಷರಾದ ಆಯ್ಯೂಬ್ ಉಳ್ಳಾಲ್ ತಮ್ಮ ಅಧ್ಯಕ್ಷ ಭಾಷಣದಲ್ಲಿ ರಕ್ತದಾನದ ಮಹತ್ವ ಮತ್ತು ಅಗತ್ಯತೆಯ ಬಗ್ಗೆ ವಿವರಿಸಿ, QISF ಯಾವಾಗಲೂ ಸಮಾಜ ಸೇವೆ ಮತ್ತು ಉದಾತ್ತ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ, ICC ಅಧ್ಯಕ್ಷರಾದ ಪಿ ಏನ್ ಬಾಬುರಾಜನ್, ಇಂಡಿಯನ್ ಸ್ಪೋರ್ಟ್ಸ್ ಸೆಂಟರ್ ನ ಅಧ್ಯಕ್ಷರಾದ ಡಾಕ್ಟರ್ ಮೋಹನ್ ಥಾಮಸ್, ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸ್ಸೋಸಿಯೇಶನ್ ನ ಅಧ್ಯಕ್ಷರಾದ ಅಬ್ದುಲ್ ಮಜೀದ್, QISF ನ ಪ್ರಧಾನ ಕಾರ್ಯದರ್ಶಿ, ಸಯೀದ್ ಕೋಮಾಚಿ, QISF ನ ಪದಾಧಿಕಾರಿಗಳು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಬೆಳಿಗ್ಗೆ 7.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ನಡೆದ ಶಿಬಿರದಲ್ಲಿ 232 ಮಂದಿ ನೋಂದಾಯಿಸಿದ್ದು , 173 ಮಂದಿ ಯಶಸ್ವಿಯಾಗಿ ರಕ್ತದಾನ ಮಾಡಿದರು.

QISF ನ ಝಕರೀಯ ಪಾಂಡೇಶ್ವರ, ಇಬ್ರಾಹಿಂ U B, ಇರ್ಷಾದ್ ಕುಳಾಯಿ, ಅನ್ವರ್ ಅಂಗರಗುಂಡಿ, ಇಮ್ತಿಯಾಜ಼್ ಕಾರ್ನಾಡ್, ಖಾಲಿದ್ ಬೆಳಪು, ನಯೀಮ್ ಬೆಳಪು, ಅಶ್ರಫ್ ಗೇರುಕಟ್ಟೆ, ಇಮ್ರಾನ್ ಸುನ್ನತ್ಕೆರೆ, ಇರ್ಫಾನ್ ಕಾಪು, ಶಫೀಕ್ ಪುತ್ತೂರು, ಮೊಹಮ್ಮದ್ ಶಾಫಿ ಕಾರ್ಕಳ, ಇರ್ಫಾನ್ ಅಡ್ಯಾರ್, ರಫೀಕ್ ಉಪ್ಪಿನಂಗಡಿ, ಇಬ್ರಾಹಿಂ ಸುಳ್ಯ, ಖಲಂದರ್ ಜಲಸೂರ್, ಸಫ್ವಾನ್ ಉಜಿರೆ, ಶಕೀಲ್ ಕೋಟೇಶ್ವರ, ಇಮ್ರಾನ್ ಮೂಡಬಿದ್ರೆ, ಅಶೀರ್ ಉಪ್ಪಿನಂಗಡಿ, ನಿಹಾಲ್ ಉಡುಪಿ, ತಬರೇಜ್ ಕಾಪು, ಹನೀಫ್ ಮೊಂಟೆಪಡಾವ್, ರ್ಜುನೈದ್ ಕುಂಜತ್ತೂರ್, ಬಶೀರ್ ಮಾಚಂಪಾಡಿ ಹಾಗೂ ಮತ್ತಿತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿಗಳಾದ ಮೊಹಮ್ಮದ್ ಫಹದ್ ಅತಿಥಿಗಳನ್ನು ಮತ್ತು ರಕ್ತದಾನಿಗಳನ್ನು ಸ್ವಾಗತಿಸಿದರು. ಮತ್ತೊಬ್ಬ ಕಾರ್ಯದರ್ಶಿಗಳಾದ ಆತಿಖ್ ಮಡಿಕೇರಿ ಧನ್ಯವಾದಗಳನ್ನು ಅರ್ಪಿಸಿದರು.ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !! Not allowed copy content from janadhvani.com