ಸುರತ್ಕಲ್, ಫೆ.9: ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್ ಗೇಟ್ ಸುಲಿಗೆಯ ವಿರುದ್ಧ ಆಶಿಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ, ಬುಧವಾರ ಮೂರನೇ ದಿನಕ್ಕೆ ಕಾಲಿರಿಸಿದೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಹಕ್ಕು ಈ ಸಂವಿಧಾನ ನಮಗೆ ನೀಡಿದೆ, ಅಂದು ಬ್ರಿಟಿಷರ ವಿರುದ್ಧ ಇದೇ ರೀತಿಯ ಹೋರಾಟದಿಂದಲೇ ನಾವು ಭಾರತಕ್ಕೆ ಸ್ವಾತಂತ್ರ್ಯವನ್ನು ಪಡೆದುಕೊಂಡಿದ್ದೇವೆ, ಎನ್ಐಟಿಕೆ ಅಕ್ರಮ ಮತ್ತು ಅವೈಜ್ಞಾನಿಕ ಟೋಲ್ ಗೇಟ್ ನಿಂದಾಗಿ ಪ್ರತಿಯೊಬ್ಬರಿಗೂ ಅನ್ಯಾಯ ಆಗುತ್ತಿದೆ, ಈ ಟೋಲ್ ಗೇಟ್ ಅನ್ನು ಮುಚ್ಚಲೇಬೇಕು ಎಂಬುದು ನಮ್ಮ ಆಗ್ರಹ, ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ, ಮಾನ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಇಲ್ಲಿಗೆ ಬಂದು ನಮ್ಮ ಮನವಿಯನ್ನು ಸ್ವೀಕರಿಸಲಿ ಎಂದು ಆಸಿಫ್ ಅಪದ್ಬಂದವ ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದಲೇ ವಿವಿಧ ಸಂಘಟನೆಗಳ ಮುಖಂಡರು ಸದಸ್ಯರು ಧರಣಿ ಸ್ಥಳಕ್ಕೆ ಬಂದು, ಆಸಿಫ್ ಆಪತ್ಬಾಂಧವ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಯುವ ಸೇನೆ ಕಾಪು ತಾಲೂಕು ಅಧ್ಯಕ್ಷರು ಲೋಕೇಶ್ ಪಡುಬಿದ್ರಿ, ಮಾಜಿ ಮೇಯರ್ ಅಶ್ರಫ್, ಎಸ್ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ, ಗಡಿನಾಡ ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ಎಸ್ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲಾಂ, ಕಾರ್ಯದರ್ಶಿ ಮೊಹಮ್ಮದ್ ಅರಫಾತ್, ಝಾಕಿರ್ ಹಾಜಿ, ಮೊಹಮ್ಮದ್ ಅಲಂಗಾರ್, ಇನ್ನಿತರರು ಧರಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ: ಅದ್ದಿ ಬೊಳ್ಳೂರು.