ಹಿಜಾಬ್ ಒಂದು ಅನಗತ್ಯ ವಿವಾದವಾಗಿತ್ತು.
ಧಾರ್ಮಿಕ ವಸ್ತ್ರಗಳನ್ನು ನಿಷೇಧಿಸುವ ಕಾನೂನು ಭಾರತದಲ್ಲಿ ಎಲ್ಲೂ ಇಲ್ಲ. ಸಮಯ ಸಂದರ್ಭಕ್ಕೆ ಅನುಗುಣವಾಗಿ ಏನಾದರು ಬದಲಾವಣೆ ತರುವುದಾದರೆ ಕಾಲೇಜು ಅಡಳಿತ ಮಂಡಲಿ ಮತ್ತು ವಿದ್ಯಾರ್ಥಿಗಳ ಪೊಷಕರ ಜೊತೆ ಮಾತಕತೆ ನಡೆಸಿ ಸಮಸ್ಯೆಯನ್ನ ಬಗೆಹರಿಸುದರ ಬದಲಾಗಿ ಏಕಾಏಕಿ ಹಿಜಾಬ್ ತೆಗೆದು ಕಾಲೇಜು ಪ್ರವೆಶಸಿಬೇಕು ಎಂದು ಗೇಟು ಹಾಕುವ ಕಾಲೆಜು ಪ್ರಾಂಶುಪಾಲರ ನಡೆ ಭಾರೀ ಚರ್ಚೆಗೆ ಗುರಿಯಾಗಿದೆ ಎಂದು ಕರವೇ ವಕ್ತಾರ ಮೌಶೀರ್ ಅಹ್ಮದ್ ಸಾಮಣಿಗೆ ಹೇಳಿದ್ದಾರೆ.
ಕಾಲೆಜು ಕ್ಯಾಲೆಂಡರ್ ನಲ್ಲೆ ಹಿಜಾಬ್ ಹಾಕಲು ಅವಕಾಶ ಸೂಚಿಸಿದ್ದು, ಕಾಲೇಜು ಮಂಡಳಿ ರಾಜಕೀಯಕ್ಕಾಗಿ ರಂಗು ಬದಲಿಸಿದ್ದಂತಿದೆ.
ಹಿಜಾಬ್ ವಿವಾದವನ್ನು ರಾಜ್ಯ ಸರ್ಕಾರ ನ್ಯಾಯಪಕ್ಷಪಾತಿಯಾಗಿ ಸರಿಪಡಿಸಬೇಕು. ಇಲ್ಲವಾದಲ್ಲಿ ಇದು ರಾಜ್ಯಾದ್ಯಂತ ಕೋರೋನಾ ವೈರಸ್ ಗಿಂತಲೂ ವೇಗವಾಗಿ ಹಬ್ಬುವ ಸಾಧ್ಯತೆ ಇದೆ.
ಕರಾವಳಿ ಪ್ರದೇಶ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಇಂಥ ವಿಷಯಗಳಲ್ಲಿ ರಾಜಕೀಯ ನಡೆಸುವುದು ಅಕ್ಷ್ಯಮ್ಯ. ಹಿಜಾಬ್ ವಿವಾದದಿಂದ ವಿದ್ಯಾರ್ಥಿಗಳ ಶ್ಯೆಕ್ಷಣಿಕ ಜೀವನಕ್ಕೆ ಅಡಚಣೆಯಾಗಲಿದೆ, ಅಲ್ಲದೆ ಶಾಂತಿ ಪ್ರಿಯ ಜಿಲ್ಲೆಯನ್ನ ಅಶಾಂತಿಯ ಜ್ವಾಲೆಗೆ ತಲ್ಲುವುದು ಸಲ್ಲದು. ಯಾರೇ ಅದರೂ ಸಮಾಜದ ಶಾಂತಿ, ನೆಮ್ಮದಿಗೆ ಭಂಗ ತರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.


