ಮೀರತ್,ಫೆ.3: ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ವೇಳೆ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಅವರ ವಾಹನವನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ.ಈ ಬಗ್ಗೆ ಸ್ವತಃ ಉವೈಸಿಯವರೇ ಟ್ವೀಟ್ ಮಾಡಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ತಂಡ ಗುಂಡು ಹಾರಿಸಿದೆ. ದಾಳಿಯಲ್ಲಿ ತನಗೆ ಯಾವುದೇ ಗಾಯವಾಗಿಲ್ಲ, ಕಾರಿನ ಟೈರ್ ಪಂಕ್ಚರ್ ಆಗಿದ್ದರಿಂದ ಮತ್ತೊಂದು ಕಾರಿನಲ್ಲಿ ದೆಹಲಿಗೆ ವಾಪಸಾಗಿದ್ದೇನೆ ಎಂದು ಉವೈಸಿ ಹೇಳಿದ್ದಾರೆ. ಯುಪಿಯ ಮೀರತ್‌ನ ಕಿತ್ತೌರಿನಲ್ಲಿ ಪ್ರಚಾರ ಸಭೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ. ಉತ್ತರ ಪ್ರದೇಶದ ಚಜರ್ಸಿ ಟೋಲ್ ಪ್ಲಾಜಾ ಬಳಿ ಈ ದಾಳಿ ನಡೆದಿದೆ.
“ಛಜರ್ಸಿ ಟೋಲ್ ಗೇಟ್ ಬಳಿ ಮೂರು ಮಂದಿಯ ಗುಂಪೊಂದು ನನ್ನ ಕಾರಿಗೆ 4 ಸುತ್ತು ಗುಂಡು ಹಾರಿಸಿದೆ. ಆ ಬಳಿಕ ಆಯುಧಗಳನ್ನು ಅಲ್ಲೇ ಬಿಟ್ಟು ಪರಾರಿಯಾದರು. ನನ್ನ ಕಾರಿನ ಟೈರ್ ಪಂಕ್ಚರ್ ಆಗಿದೆ, ಆದರೆ ನಾನು ಇನ್ನೊಂದು ಕಾರಿನಲ್ಲಿ ಹೊರಟಿದ್ದೇನೆ.ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಅಲ್ಹಮ್ದುಲಿಲ್ಲಾಹ್” ಎಂದು ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
कुछ देर पहले छिजारसी टोल गेट पर मेरी गाड़ी पर गोलियाँ चलाई गयी। 4 राउंड फ़ायर हुए। 3-4 लोग थे, सब के सब भाग गए और हथियार वहीं छोड़ गए। मेरी गाड़ी पंक्चर हो गयी, लेकिन मैं दूसरी गाड़ी में बैठ कर वहाँ से निकल गया। हम सब महफ़ूज़ हैं। अलहमदु’लिलाह। pic.twitter.com/Q55qJbYRih
— Asaduddin Owaisi (@asadowaisi) February 3, 2022