janadhvani

Kannada Online News Paper

ದುಬೈ: ಒಂದೇ ರನ್ವೇಯಲ್ಲಿ ಟೇಕಾಫ್ ಗೆ ಯತ್ನಿಸಿದ ಎರಡು ವಿಮಾನಗಳು- ತಪ್ಪಿದ ಭಾರಿ ದುರಂತ

ಬೆಂಗಳೂರು ಮತ್ತು ಹೈದರಾಬಾದ್‌ಗೆ ತೆರಳುತ್ತಿದ್ದ ಎಮಿರೇಟ್ಸ್‌ನ ಎರಡು ವಿಮಾನಗಳು ಅಪಘಾತದಿಂದ ಪಾರಾಗಿವೆ.

ನವದೆಹಲಿ|ದುಬೈ ವಿಮಾನ ನಿಲ್ದಾಣದಲ್ಲಿ ಭಾರೀ ಅಚಾತುರ್ಯವೊಂದು ಸಂಭವಿಸಿದ್ದು ಅಧಿಕಾರಿಗಳ ಸಮಯಪ್ರಜ್ಞೆಯಿಂದ ಬಲು ದೊಡ್ಡ ದುರಂತವು ತಪ್ಪಿದಂತಾಗಿದೆ. ಒಂದೇ ರನ್ ವೇಯಲ್ಲಿ ಎರಡು ವಿಮಾನಗಳು ಟೇಕಾಫ್ ಆಗಲು ಯತ್ನಿಸಿದಾಗ ಈ ಘಟನೆ ನಡೆದಿದೆ. ಕೊನೆಯ ಕ್ಷಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಸಮಯೋಚಿತ ಮಧ್ಯಪ್ರವೇಶದ ನಂತರ ಒಂದು ವಿಮಾನವನ್ನು ಟ್ಯಾಕ್ಸಿ ಬೇಗೆ ತಿರುಗಿಸುವಲ್ಲಿ ಯಶಸ್ವಿಯಾದ್ದರಿಂದ ಭಾರೀ ಅಪಘಾತವೂಂದು ತಪ್ಪಿದೆ.

ಬೆಂಗಳೂರು ಮತ್ತು ಹೈದರಾಬಾದ್‌ಗೆ ತೆರಳುತ್ತಿದ್ದ ಎಮಿರೇಟ್ಸ್‌ನ ಎರಡು ವಿಮಾನಗಳು ಅಪಘಾತದಿಂದ ಪಾರಾಗಿವೆ. ಹೈದರಾಬಾದ್‌ಗೆ ತೆರಳುವ ಇಕೆ 524 ವಿಮಾನ ರಾತ್ರಿ 9.45ಕ್ಕೆ ಹೊರಡಬೇಕಿತ್ತು. ಫ್ಲೈಟ್ EK568 ಕೇವಲ ಐದು ನಿಮಿಷಗಳ ಅಂತರದಲ್ಲಿ ಟೇಕ್ ಆಫ್ ಮಾಡಲು ನಿರ್ಧರಿಸಲಾಗಿತ್ತು. ದುರದೃಷ್ಟವಶಾತ್ ಈ ಎರಡು ವಿಮಾನಗಳು ಒಂದೇ ಸಮಯದಲ್ಲಿ ರನ್‌ವೇ ಮೇಲೆ ಬಂದಿವೆ.

ಹೈದರಾಬಾದಿಗೆ ಹೊರಟಿದ್ದ ವಿಮಾನ ಟೇಕಾಫ್‌ಗಾಗಿ ವೇಗವಾಗಿ ಸಾಗುತ್ತಿದ್ದಾಗ ಅದೇ ದಿಕ್ಕಿನಲ್ಲಿ ಇನ್ನೊಂದು ವಿಮಾನ ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದಾರೆ. ಟೇಕ್-ಆಫ್ ಅನ್ನು ತಕ್ಷಣವೇ ನಿಲ್ಲಿಸುವಂತೆ ಏರ್ ಟ್ರಾಫಿಕ್ ಕಂಟ್ರೋಲ್ ಗೆ ಸೂಚಿಸಲಾಗಿದೆ. ನಂತರ ವಿಮಾನವು ನಿಧಾನವಾಗಿ, ರನ್ವೇ ದಾಟಿ ಟ್ಯಾಕ್ಸಿ ಬೇಗೆ ಚಲಿಸಿತು. ಇದೇ ರನ್ ವೇಯಲ್ಲಿ ಬೆಂಗಳೂರಿಗೆ ತೆರಳುವ ವಿಮಾನವನ್ನು ಟೇಕ್ ಆಫ್ ಮಾಡಲಾಯಿತು. ಕೆಲವು ನಿಮಿಷಗಳ ನಂತರ ಹೈದರಾಬಾದ್ ವಿಮಾನ ಹೊರಟಿದೆ.

ಯುಎಇಯಲ್ಲಿನ ಎಎಐಎಸ್ ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತಿದೆ. ಗಂಭೀರ ಭದ್ರತಾ ಲೋಪವನ್ನು ಎಮಿರೇಟ್ಸ್ ಖಚಿತಪಡಿಸಿದೆ ಎಂದು ANI ವರದಿ ಮಾಡಿದೆ.

error: Content is protected !! Not allowed copy content from janadhvani.com