ವಿಟ್ಲ: ಮನೆಯ ಆವರಣದಲ್ಲಿ ಮೊಟ್ಟೆ ಬಾಕ್ಸ್ ಇಟ್ಟ ವಿಚಾರದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮತ್ತು ಆಕೆಯ ಪತಿಗೆ ಹಲ್ಲೆ ನಡೆಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ನಡೆದಿದೆ.
ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ನೆಬಿಸಾ ಅವರು ಹಲ್ಲೆಗೊಳಗಾಗಿ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಾದರೆ, ಅವರ ಪತಿ ಮಹಮ್ಮದ್ ಅಶ್ರಪ್ ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ವಿಟ್ಲ ಪಡ್ನೂರು ಗ್ರಾಮದ ಬಿಕ್ನಾಜೆ ನಿವಾಸಿ, ಹಸನ್ ಯಾನೆ ಹಸೈನಾರ್ ಬಿಕ್ನಾಜೆ ಎಂಬಾತನ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ನೆಬಿಸಾ ಮತ್ತು ಪತಿ ಅಶ್ರಪ್ ಅವರು ತನ್ನ ಮನೆಯಲ್ಲಿ ಜೀವನೋಪಯಕ್ಕಾಗಿ ಮೊಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿಗೆ ಮಾರಾಟಕ್ಕೆಂದು ಮೊಟ್ಟೆ ತರಲಾಗಿತ್ತು. ಮೊಟ್ಟೆ ಮಾರಾಟಗಾರರು ಮೈಮುನಾ ಅವರ ಮನೆಯ ಆವರಣದಲ್ಲಿ ಈ ಮೊಟ್ಟೆ ಇಟ್ಟು ಹೋಗಿದ್ದರು. ಅದನ್ನು ಅಶ್ರಪ್ ಅವರ ಪತ್ನಿ ನೆಬಿಸಾ ಒಂದೊಂದು ಬಾಕ್ಸ್ ಮನೆಗೆ ತರುತ್ತಿದ್ದರು. ಈ ಸಂದರ್ಭ ಆರೋಪಿ ಹಸನ್ ಬಿಕ್ನಾಜೆ ಮೊಟ್ಟೆ ಇಲ್ಲಿ ಯಾಕೆ ಇಟ್ಟದ್ದು ಎಂದು ಗದರಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯನ್ನು ದೂಡಿ ಹಾಕಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೆಬಿಸಾ ಅವರು ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ನೆಬಿಸಾ ತನ್ನ ವಿರುದ್ಧ ದೂರು ನೀಡಿದ ವಿಚಾರದಲ್ಲಿ ಆಕ್ರೋಶ ಆರೋಪಿ ನೆಬಿಸಾ ಅವರ ಪತಿ ಅಶ್ರಪ್ ಅವರು ಮರುದಿನ ರಾತ್ರಿ ಸೀಯಾಳದ ಸಿಪ್ಪೆಗಳು ತುಂಬಿದ ಗೋಣಿ ಚೀಲವನ್ನು ಹೆಗಲಿಗೇರಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಕೊಡಂಗಾಯಿ ಶಾಲಾ ಬಳಿ ಪೊದೆಯಲ್ಲಿ ಅವಿತುಕೊಂಡಿದ್ದ ಆರೋಪಿ ಹಸನ್ ಬಿಕ್ನಾಜೆ ಎದುರಿನಿಂದ ದೂಡಿಹಾಕಿ ರಭಸದಿಂದ ನೆಲಕ್ಕೆ ಬಿದ್ದ ನನ್ನ ಮೇಲೆ ಕಬ್ಬಿಣದ ಊಕಿನಿಂದ ಹಲ್ಲೆ ನಡೆಸಿದ್ದಾರೆ ಅಶ್ರಪ್ ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.