ಮಲಪ್ಪುರಂ| ಇಕೆ ವಿಭಾಗ ಸಮಸ್ತದ ಅಧ್ಯಕ್ಷರಾದ ಜಿಫ್ರಿ ಮುತ್ತುಕೋಯ ತಂಙಳ್ ಅವರು, ತಮಗೆ ಹಲವು ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿದೆ ಆದರೂ ದಿಟ್ಟ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.(ವೀಡಿಯೋ)
ನಿಗೂಢವಾಗಿ ಮರಣಹೊಂದಿರುವ ಚೆಂಬರಿಕ ಖಾಝಿ ಸಿಎಂ ಅಬ್ದುಲ್ಲಾ ಮುಸ್ಲಿಯಾರ್ ಅವರ ಅನುಭವ ತಮಗೂ ಉಂಟಾಗಲಿದೆ ಎಂದು ಹಲವರು ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ತಂಙ್ಞಳ್ ಬಹಿರಂಗಪಡಿಸಿದರು. ಮಲಪ್ಪುರಂ ಅನಕ್ಕಯಂನಲ್ಲಿ ಅಖಿಲ ಕೇರಳ ಹಿಫ್ಲ್ ಕಾಲೇಜು ಕಲಾ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ಆಂದೋಲನದೊಂದಿಗೆ ಮುಂದುವರಿಯುವ ವೇಳೆ ಹೆಚ್ಚಿನ ತೊಂದರೆಗಳನ್ನು ಅನುಭವಿಸಬೇಕು. ಈಗ ಹಲವು ಆಫರ್‌ಗಳಿವೆ. ಸಿಎಂ (ಚೆಂಬರಿಕ ಖಾಝಿ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್) ಅವರ ಅನುಭವ ಹಾಗೂ ಇನ್ನು ಕೆಲವರ ಅನುಭವ ಉಂಟಾಗಲಿದೆ ಎಂದು ಎಂಬಿತ್ಯಾದಿ ಕರೆಗಳು ಕೆಲವು ಅಲ್ಪಜ್ಞಾನಿಗಳಿಂದ ಬರುತ್ತಿದೆ.”
“ನನಗೆ ಅಂತಹ ಅನುಭವ ಉಂಟಾದಲ್ಲಿ, ಚೆಂಬರಿಕಾ ಖಾಝಿಯವರ ಅನುಭವ ಉಂಟಾದರೆ, ನನ್ನ ಬಗ್ಗೆ ಆರೋಪಿಸಿ ಬರೆಯುವವರನ್ನು ಬಂಧಿಸಿ ಎಂದು ನಾನು ಹೇಳಲು ಹೊರಟಿರುವೆ”
“ಆದರೂ, ದಿಟ್ಟ ಹಿಜ್ಜೆಯಿಂದ ನಾನು ಹಿಂದೆ ಸರಿಯುವವನಲ್ಲ. ಧೈರ್ಯದಿಂದ ಮುಂದೆ ಸಾಗುತ್ತೇನೆ.ಮರಣವು ಇದೇ ವಿಚಾರದಲ್ಲಾದರೆ ಆಗಲಿ. ಅಲ್ಲಾಹು ನಿಮಗೆ ಈಮಾನ್‌ನೊಂದಿಗೆ ಕೊನೆಯುಸಿರೆಳೆಯುವಂತೆ ಅನುಗ್ರಹಿಸಲಿ” ಎಂದು ಅವರು ಹೇಳಿದರು.
ವಕ್ಫ್ ಬೋರ್ಡ್ ನೇಮಕವನ್ನು ಪಿಎಸ್‌ಸಿಗೆ ಬಿಟ್ಟುಕೊಡುವ ವಿರುದ್ಧ ಮಸೀದಿ ಕೇಂದ್ರಿತ ಪ್ರತಿಭಟನೆಗೆ ಮುಸ್ಲಿಂ ಲೀಗ್‌ನ ಕರೆಯನ್ನು ಬಹಿರಂಗವಾಗಿ ತಿರಸ್ಕರಿಸಿದ ತಂಙಳ್ ರ ವಿರುದ್ಧ ಲೀಗ್ ಕಾರ್ಯಕರ್ತರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುತ್ತಿರುವುದನ್ನು ಮುಂದುವರೆಸುತ್ತಿರುವ ವೇಳೆಯಲ್ಲೇ ಈ ಬೆದರಿಕೆ ಬಂದಿದೆ.
ಮಸೀದಿಯಲ್ಲಿ ವಕ್ಫ್ ವಿಚಾರದಲ್ಲಿ ಪ್ರತಿಭಟನೆ ನಡೆಸುವ ಮುಸ್ಲಿಂ ಲೀಗ್ ನಿರ್ಧಾರವನ್ನು ತಿರಸ್ಕರಿಸಿದಾಗ ಲೀಗ್ ಆಕ್ರೋಶಗೊಂಡಿತು. ಇದರ ಬೆನ್ನಲ್ಲೇ ಕೋಝಿಕ್ಕೋಡ್ ಕಡಲ ತೀರದಲ್ಲಿ ಲೀಗ್ ಆಯೋಜಿಸಿದ್ದ ರ್ಯಾಲಿಯಲ್ಲೂ ತಂಙಳರ ವಿರುದ್ಧ ಪರೋಕ್ಷ ಟೀಕೆ ವ್ಯಕ್ತವಾಗಿತ್ತು.
ಸುಳ್ಳು ಸುದ್ದಿ ಹರಡುವ ಏಕೈಕ ಮಾದ್ಯಮ ಇದು