janadhvani

Kannada Online News Paper

“ರೇಪ್ ತಡೆಯಲು ಸಾಧ್ಯವಿಲ್ಲದಿದ್ದರೆ ಎಂಜಾಯ್ ಮಾಡಿ”-ಕ್ಷಮೆ ಕೋರಿದ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್

ನಾನು ನಿನ್ನೆ ಕಲಾಪ ನಡೆಯುವ ವೇಳೆ ಭಾಷಣಾಕಾರರ ಪಟ್ಟಿ ಜಾಸ್ತಿ ಆಗುತ್ತಿದೆ. ಸಭಾಧ್ಯಕ್ಷರ ಅನುಭವಿಸುತ್ತಿರುವ ಸಮಯ ಹೊಂದಾಣಿಕೆ ಸಮಸ್ಯೆ ಬಗ್ಗೆ ನಾನು ಕೂಡ ಇದನ್ನು ಅನುಭವಿಸುತ್ತಿದ್ದೇನೆ ಎಂಬ ನೋವನ್ನು ಸಭಾಧ್ಯಕ್ಷ ಕಾಗೇರಿಯವರಿಗೆ ಹೇಳಿಕೊಂಡೆ.

ಬೆಳಗಾವಿ (ಸುವರ್ಣ ವಿಧಾನಸೌಧ) ಡಿ.17: ಅತ್ಯಾಚಾರ ತಡೆಯಲು ಸಾಧ್ಯವಿಲ್ಲದಿದ್ದರೆ ಎಂಜಾಯ್ ಮಾಡಿ ಎಂಬ ಮಾತು ಆಡಿದ್ದ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಇಂದು ಮಹಿಳೆಯರ ಕ್ಷಮೆ ಕೋರಿದ್ದಾರೆ. ಮಾಜಿ ಸಭಾಧ್ಯಕ್ಷರಾದವರು ಮಹಿಳೆಯರ ಬಗ್ಗೆ ಕೇವಲ ಮಾತನಾಡಿದ್ದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇಂದು ಬೆಳಗ್ಗೆ ಸಭೆ ಆರಂಭಗೊಳ್ಳುತ್ತಿದ್ದಂತೆ ಎದ್ದು ನಿಂತ ರಮೇಶ್ ಕುಮಾರ್, “ನಾನು ನಿನ್ನೆ ಕಲಾಪ ನಡೆಯುವ ವೇಳೆ ಭಾಷಣಾಕಾರರ ಪಟ್ಟಿ ಜಾಸ್ತಿ ಆಗುತ್ತಿದೆ. ಸಭಾಧ್ಯಕ್ಷರ ಅನುಭವಿಸುತ್ತಿರುವ ಸಮಯ ಹೊಂದಾಣಿಕೆ ಸಮಸ್ಯೆ ಬಗ್ಗೆ ನಾನು ಕೂಡ ಇದನ್ನು ಅನುಭವಿಸುತ್ತಿದ್ದೇನೆ ಎಂಬ ನೋವನ್ನು ಸಭಾಧ್ಯಕ್ಷ ಕಾಗೇರಿಯವರಿಗೆ ಹೇಳಿಕೊಂಡೆ. ನಾನು ಇಂಗ್ಲಿಷ್ ಭಾಷೆಯ ಒಂದು ಮಾತನ್ನು ಉಲ್ಲೇಖ ಮಾಡಿದೆ. ಹೆಣ್ಣಿಗೆ ಅಪಮಾನ ಮಾಡುವುದು, ಸದದನ ಗೌರವ ಕಡಿಮೆ ಮಾಡುವುದು, ಲಘುವಾಗಿ ವರ್ತಿಸಬೇಕೆಂದು ಯಾವ ದುರುದ್ದೇಶ ಇರಲಿಲ್ಲ. ಯಾವ ಸನ್ನಿವೇಶದಲ್ಲಿ ಏನು ಹೇಳಿದೆ ಅನ್ನೋದು ಹೊರಟು ಹೋಗುತ್ತೆ. ನಾನು ನನ್ನನ್ನು ರಕ್ಷಣೆ ಮಾಡಿಕೊಳ್ಳುತ್ತಿಲ್ಲ. ಕಲಾಪ ನಡೆಯುವ ಸಂದರ್ಭದಲ್ಲಿ ನಾನು ಉಲ್ಲೇಖ ಮಾಡಿರುವ ಮಾತುಗಳು ಯಾರಿಗೆ ಎಲ್ಲೇ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ” ಎಂದು ರಮೇಶ್ ಕುಮಾರ್ ಹೇಳಿದರು.

“ನನಗೆ ಯಾವ ಪ್ರತಿಷ್ಠೆ ಇಲ್ಲ. ಸಾಮಾನ್ಯ ಹಿನ್ನೆಲೆಯಿಂದ ಬಂದವ್ನು. ಸದ ಕಾಲ ಗೌರವವಾಗಿ ನಡೆದುಕೊಳ್ಳಬೇಕೆಂದುವನು. ಯಾರಿಗೇನು ಸವಾಲು ಮಾಡಬೇಕಂತಿಲ್ಲ. ನನಗೆ ಯಾವ ಪ್ರತಿಷ್ಠೆ ಇಲ್ಲ. ನಾನು ಹೇಳುತ್ತಿದ್ದಾಗ ನೀವು (ಕಾಗೇರಿ) ನಗ್ತಾ ಇದ್ದೀರಿ ತಮ್ಮನ್ನು ಅಪರಾಧಿ ಮಾಡಿದ್ದಾರೆ. ತಮ್ಮದು ಆ ಉದ್ದೇಶ ಇರಲಿಕ್ಕಿಲ್ಲ. ನಾನು ಆ ಸಂದರ್ಭದಲ್ಲಿ ಉಲ್ಲೇಖ ಮಾಡಿರುವ ಮಾತುಗಳಿಂದ ಮಹಿಳೆಯರಿಗೆ ಒಂದು ವೇಳೆ ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ನನ್ನಿಂದ ಅಪರಾಧ ಆಗಿದೆಯೆಂದು ಈಗಾಗಲೇ ತೀರ್ಪು ಕೊಟ್ಟು ಬಿಟ್ಟಿದ್ದಾರೆ. ಆದ್ದರಿಂದ ನಾನು ಕ್ಷಮೆ ಕೋರುತ್ತೇನೆ. ಈ ಘಟನೆಗೆ ಇಲ್ಲಿಗೆ ಸುಖಾಂತ್ಯ ಹಾಡಿ ಕಲಾಪ ನಡೆಸಿಕೊಂಡು ಹೋಗೋಣ. ವಿಶೇಷವಾಗಿ ಹೆಣ್ಣು ಕುಲಕ್ಕೆ ನೋವಾಗಿದ್ದರೆ, ನನಗೆ ಯಾವ ಪ್ರತಿಷ್ಠೆ ಇಲ್ಲದೆ, ಪ್ರಾಮಾಣಿಕವಾಗಿ ಶುದ್ಧ ಹೃದಯದಿಂದ ವಿಷಾಧ ವ್ಯಕ್ತಪಡಿಸುತ್ತೇನೆ” ಎಂದರು.

ಬಳಿಕ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಚಾರವನ್ನು ಬೆಳಸೋದು ಬೇಡ. ನಾವೆಲ್ಲರೂ ಒಂದು ಕುಟುಂಬದಲ್ಲಿರುವಂತಹವರು. ನಮಗೂ ಸಂಸಾರಿಕ ಭಾವನಾತ್ಮಕ ಸಂಬಂಧ ಇದ್ದೆ ಇದೆ. ನಿನ್ನೆ ನಡೆದ ಘಟನೆಯಿಂದ ರಮೇಶ್ ಕುಮಾರ್ ಅವರ ಮಾತು ವಿವಾದ ಸ್ವರೂಪ ಪಡೆದುಕೊಂಡಿದೆ. ನಮ್ಮ ಸದನದಲ್ಲಿ ನಾವೆಲ್ಲರೂ ಮಹಿಳೆಯರ ಬಗ್ಗೆ ಯಾವ ಗೌರವದ ಸ್ಥಾನ ಇದೆಯೋ ಆ ಸ್ಥಾನವನ್ನು ನಾವೆಲ್ಲರೂ ಇಟ್ಟುಕೊಂಡವರೇ. ಅದನ್ನು ಕಾಪಾಡುವುದನ್ನು ಹಾಗೂ ಹೆಚ್ಚಿಸುವುದಕ್ಕೆ ಬದ್ಧರಾಗಿರುತ್ತೇವೆ. ಇಲ್ಲಿ ನಡೆದ ಘಟನೆಯನ್ನು ಬೆಳೆಸುವುದು ಬೇಡ ಎಂದು ವಿವಾದಕ್ಕೆ ಸ್ಪೀಕರ್ ಕಾಗೇರಿ ತೆರೆ ಎಳೆದರು.

ಮಹಿಳೆ ಅತ್ಯಾಚಾರದಿಂದ ಪಾರಾಗಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಆ ಪರಿಸ್ಥಿತಿಯನ್ನು ಸಂತಸದಿಂದ ಅನುಭವಿಸಬೇಕು (“Actually there is a saying, when rape is inevitable laydown and enjoy it. That’s the exactly the position in to which you are”) ಎಂದು  ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಿನ್ನೆ ಹೇಳಿದ್ದರು.