janadhvani

Kannada Online News Paper

ನಾಳೆ ಶಾರ್ಜಾದಲ್ಲಿ ಮುಈನುಸ್ಸುನ್ನ ಮದನೀಯಂ ಕಾರ್ಯಕ್ರಮ

ಉತ್ತರ ಕರ್ನಾಟಕದ‌ ಶಿಕ್ಷಣ ಆಸರೆ ಮುಈನುಸ್ಸುನ್ನ ಅಕಾಡೆಮಿ ಕರ್ನಾಟಕದ ಯುಎಇ ಕಾರ್ಯಕರ್ತರು ಸೇರಿ ನಡೆಸುತ್ತಿರುವಂತಹ ಐತಿಹಾಸಿಕವಾದ ಮುಈನುಸ್ಸುನ್ನ ಮದನೀಯಂ ಮಜ್ಲಿಸ್ ಹಾಗೂ ಅಂಙ ನಂಙಲಂಙ ಶೈಕ್ಷಣಿಕ ಜಾಗೃತಿ ಸಮಾವೇಶ. ನಾಳೆ ಯುಎಇ ಸಮಯ 5 ಗಂಟೆಗೆ ಶಾರ್ಜದ ಮುಬಾರಕ್ ಸೆಂಟರ್ ನಲ್ಲಿ ನಡೆಯಲಿದೆ. ಯುಎಇ ಮುಈನುಸ್ಸುನ್ನ ಸಮಿತಿ ಅಧ್ಯಕ್ಷರಾದ ಕಮಾಲುದ್ದೀನ್ ಅಂಬ್ಲಮೊಗರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು SEDC ಅಧ್ಯಕ್ಷರಾದ ಕೆ.ಕೆ.ಎಂ.ಮುಹಮ್ಮದ್‌ ಕಾಮಿಲ್ ಸಖಾಫಿ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಕೆ.ಎಂ.ಮುಸ್ತಫಾ ನಈಮಿ “ಅಂಙ ನಂಙಲಂಙ” ಜಾಗೃತಿ ಭಾಷಣ ಮಾಡಲಿದ್ದು ಮದನೀಯಂ ಮಜ್ಲಿಸಿನ ಮೂಲಕ ಲಕ್ಷಾಂತರ ಜನ ಹೃದಯಗಳಿಗೆ ಆಧ್ಯಾತ್ಮಿಕ ಸಿಂಚನವನ್ನು ಮೂಡಿಸಿದ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಮುಖ್ಯ ಪ್ರಭಾಷಣ ನಡೆಸಲಿಕ್ಕಿದ್ದಾರೆ ಎಂದು ಸ್ವಾಗತ ಚೆಯರ್ಮ್ಯಾನ್ ಅಶ್ರಫ್ ಸತ್ತಿಕ್ಕಲ್ಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.