ಅಬುಧಾಬಿ: ಮುಸ್ಲಿಮೇತರ ವಲಸಿಗರ ವೈಯಕ್ತಿಕ ಪ್ರಕರಣಗಳ ವಿಚಾರಣೆಗೆ ಅಬುಧಾಬಿಯಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ.
ಅಬುಧಾಬಿ ನ್ಯಾಯಾಂಗ ಇಲಾಖೆ (ಎಡಿಜೆಡಿ) ಅಧೀನ ಕಾರ್ಯದರ್ಶಿ ಯೂಸುಫ್ ಸಯೀದ್ ಅಲ್ ಅಬ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯುಎಇ ಅಧ್ಯಕ್ಷರಾದ, ಅಬುಧಾಬಿ ಎಮಿರೇಟ್‌ನ ಆಡಳಿತಗಾರ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಅವರು ಈ ನ್ಯಾಯಾಲಯವನ್ನು ಘೋಷಣೆ ಮಾಡಿದರು.
ವಲಸಿಗ ಮುಸ್ಲಿಮೇತರರ ಕೌಟುಂಬಿಕ ವ್ಯಾಜ್ಯಗಳನ್ನು ಪರಿಹರಿಸಲು ನ್ಯಾಯಾಂಗ ಕಾರ್ಯವಿಧಾನವನ್ನು ಸಾಕಾರಗೊಳಿಸುವುದು ಇದರ ಗುರಿಯಾಗಿದೆ. ಮುಸ್ಲಿಮೇತರರ ಕೌಟುಂಬಿಕ ವ್ಯವಹಾರಗಳಿಗಾಗಿ ಮೊದಲ ವಿಶೇಷ ನ್ಯಾಯಾಲಯದ ಸ್ಥಾಪನೆಯು, ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಯೂಸುಫ್ ಸಯೀದ್ ಅಲ್ ಅಬ್ರಿ ಹೇಳಿದರು.
ನ್ಯಾಯಾಲಯವು ವಿವಾಹ, ವಿಚ್ಛೇದನ, ಪಿತೃತ್ವ, ಉತ್ತರಾಧಿಕಾರ ಮತ್ತು ವೈಯಕ್ತಿಕ ಪದವಿಯನ್ನು ಪರಿಗಣಿಸುತ್ತದೆ. ನ್ಯಾಯಾಲಯದ ಪ್ರಕರಣಗಳನ್ನು ಅರೇಬಿಕ್ ಮತ್ತು ಇಂಗ್ಲಿಷ್‌ನಲ್ಲಿ ವಿಚಾರಣೆ ಮಾಡಲಾಗುತ್ತದೆ.


