ಡಿಸೆಂಬರ್ 16ರಂದು ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯ ಹನುಮಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಹತ್ತುತ್ತೇವೆ. ಹನುಮಮಾಲಾಧಾರಿಗಳನ್ನು ತಡೆಯಿರಿ ನೋಡೋಣ ಎಂದು ಶ್ರೀರಾಮಚಂದ್ರಸೇನೆ ವಿಭಾಗೀಯ ಸಂಚಾಲಕ ಸಂಜೀವ್ ಮುರಡಿ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಸವಾಲು ಹಾಕಿದ್ದಾರೆ.
ಕೋವಿಡ್ ಹರಡುವ ಹಿನ್ನೆಲ ಹೊರಜಿಲ್ಲೆಯ ಹನುಮಮಾಲಾಧಾರಿಗಳಿಗೆ ಅಂಜನಾದ್ರಿಗೆ ನಿರ್ಬಂಧ ಹೇರಲಾಗಿದೆ. ಚುನಾವಣೆಯ ಪ್ರಚಾರ, ವಿಜಯೋತ್ಸವಕ್ಕಿಲ್ಲದ ನಿರ್ಬಂಧ ಹನುಮಮಾಲಾಧಾರಿಗಳಿಗೆ ಮಾತ್ರ ಯಾಕೆ? ಡಿ 14 ರಂದು ಎಂಎಲ್ ಸಿ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿಯವರು ನಿಮ್ಮ ಕಚೇರಿಯ ಮುಂದೆ ವಿಜಯೋತ್ಸವ ಆಚರಿಸುತ್ತಾರೆ. ಆಗ ತಡೆಯಿಯುತ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಆದೇಶಿಸಿದ್ದೆ ತಪ್ಪು ಎಂದು ಬೇರೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಬೇಕು. ಈ ಆದೇಶವಿದ್ದರೂ ನಾವು 3.5 ಸಾವಿರ ಜನ ಹನುಮಮಾಲಾಧಾರಿಗಳು ಅಂಜನಾದ್ರಿ ಹತ್ತುತ್ತವೆ ತಡೆಯಿರಿ ನೋಡೋಣ ಎಂದು ಹೇಳಿದ್ದಾರೆ.
16-12-2021ರಂದು ನಡೆಯುವ ಹನುಮ ಮಾಲಾ ವಿಸರ್ಜನಾ ಕಾರ್ಯಕ್ರಮ ನಡೆಯಲಿದ್ದು, ಸದರಿ ಕಾರ್ಯಕ್ರಮದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸುಮಾರು 30 ರಿಂದ 40 ಸಾವಿರ ವರೆಗೆ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲಿ ಪವಮಾನ ಹೋಮಕ್ಕೆ ಅರ್ಚಕರ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಕರ್ಯ, ಪಾರ್ಕಿಂಗ್ ಹಾಗೂ ಗಂಗಾವತಿ ನಗರದಿಂದ ಹೊರಡುವ ಸಂಕೀರ್ತನಾ ಯಾತ್ರೆಗೆ ಭದ್ರತೆ ನೀಡುವಂತೆ ಕೋರಿ ಜಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಈ ಸಂಬಂಧ ಜಿಲ್ಲಾಡಳಿತ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರ ಸಭೆ ಗಂಗಾವತಿ ಹಾಗೂ ಹನುಮಮಾಲಾ ಕಾರ್ಯಕ್ರಮದ ಆಯೋಜಕರ ಜೊತೆ ಡಿಸೆಂಬರ್ 9ರಂದು ಸಭೆ ನಡೆಸಿತ್ತು.
ಈ ಸಭೆಯಲ್ಲಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮತ್ತು ಸೋಂಕು ಪ್ರಸರಣ ನಿಯಂತ್ರಿಸುವ ನಿಟ್ಟಿನಲ್ಲಿ ಸದರಿ ಕಾರ್ಯಕ್ರಮವನ್ನು ನಿರ್ಬಂಧಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿತ್ತು.


