ರಿಯಾದ್ : ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 4, 2021 ರಂದು ರಿಯಾದಿನಲ್ಲಿ ಮರಣ ಹೊಂದಿದ ಬಾಬು ಶಶಿಧರ ಪೂಜಾರಿಯವರ ಮೃತದೇಹವನ್ನು ನವೆಂಬರ್ 17ರಂದು ಬೇಕಾದ ದಾಖಲೆಗಳನ್ನು ಸರಿಪಡಿಸಿ ಬೆಂಗಳೂರು ಮೂಲಕ ಊರಿಗೆ ತಲುಪಿಸಲಾಯಿತು.
ಅನಾರೋಗ್ಯದಿಂದ ರಿಯಾದ್ ಸಿಮೇಶಿ ಆಸ್ಪತ್ರೆಗೆ ದಾಖಲಾಗಿದ್ದ ಬಾಬು ಶಶಿಧರ ಪೂಜಾರಿ ಎಂಬವರ ಮಾಹಿತಿ ಸಿಕ್ಕಿದ ತಕ್ಷಣ ಕಾರ್ಯಪ್ರವರ್ತರಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಸಮಿತಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ಅವರ ಕಫೀಲ್ ಹಾಗೂ ಕುಟುಂಬಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಿದೆ.
ಇದಕ್ಕಾಗಿ ಮೃತ ವ್ಯಕ್ತಿಯ ಸ್ಪಾನ್ಸರ್ ಹಾಗೂ ಕೆಸಿಎಫ್ ಸಾಂತ್ವನ ಇಲಾಖೆ ನಾಯಕರಾದ ಸಲಾಂ ಹಳೆಯಂಗಡಿ, ಮಜೀದ್ ವಿಟ್ಲ, ಭಾಷಾ ಗಂಗಾವಳಿ ದಮ್ಮಾಮ್ ಝೋನ್ , ಹನೀಫ್ ಕಣ್ಣೂರು, ಯೂಸುಫ್ ಕಳಂಜಿಬೈಲ್, ನಿಝಾಂ ಸಾಗರ್, ಹಬೀಬ್ ಟಿಎಚ್ ಸಹಕರಿಸಿದರು.
ಮೃತರು ಪತ್ನಿ, ಒಂದು ಗಂಡು ಎರಡು ಹೆಣ್ಣು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.