janadhvani

Kannada Online News Paper

ಎಸ್ಸೆಸ್ಸೆಫ್ ರಾಜ್ಯ ಪ್ರತಿಭೋತ್ಸವ ಕೃಷ್ಣಾಪುರದಲ್ಲಿ- ಮುಮ್ತಾಜ್ ಅಲೀ ಸ್ವಾಗತ ಸಮಿತಿ ಚೇರ್ಮನ್

ರಾಜ್ಯ ಪ್ರತಿಭೋತ್ಸವದ ಸ್ವಾಗತ ಸಮಿತಿ ಆಯ್ಕೆ ಕಾರ್ಯಕ್ರಮವು ಸುರತ್ಕಲ್ ಕೃಷ್ಣಾಪುರ ದಲ್ಲಿ ನಡೆದಿದ್ದು ನಿರೀಕ್ಷೆಗೂ ಮೀರಿ ಅಲ್ಲಿನ ಉಲಮಾ-ಉಮರಾ ನಾಯಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು SSF ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸ’ಅದಿ ವಹಿಸಿದ್ದರು. SYS ರಾಜ್ಯ ಪ್ರಧಾನ ಕಾರ್ಯದರ್ಶಿ MSM ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಕಾರ್ಯವನ್ನು ಉದ್ಘಾಟಿಸಿದರು.

ರಾಜ್ಯ ಪ್ರತಿಭೋತ್ಸವ ಚೇರ್ಮನ್ ಮುಸ್ತಫಾ ಸಖಾಫಿ ನಈಮಿ ಪ್ರಾಸ್ತವಿಕ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ SSF ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕಾರ್ಯದರ್ಶಿ ಹುಸೈನ್ ಸ’ಅದಿ ಹೊಸ್ಮಾರ್,ರಾಜ್ಯ ಪ್ರತಿಭೋತ್ಸವ ಸಮಿತಿಯ ಕನ್ವೀನರ್ ವಾಜಿದ್ ಹಾಸನ, SSF ರಾಜ್ಯ ನಾಯಕರಾದ ಅಲಿ ತುರ್ಕಳಿಕೆ,ಮನ್ಸೂರ್ ಉಡುಪಿ ಉಪಸ್ಥಿತರಿದ್ದರು.SSF ದ.ಕ ವೆಸ್ಟ್ ಜಿಲ್ಲೆಯ ಕಾರ್ಯದರ್ಶಿ ಫಾರೂಖ್ ಸಖಾಫಿ ಸ್ವಾಗತಿಸಿದರು.

ರಾಜ್ಯ ಪ್ರತಿಭೋತ್ಸವ ಸ್ವಾಗತ ಸಮಿತಿಯ ನಿರ್ದೇಶಕರಾಗಿ ಟಿ.ಎಂ.ಶರೀಫ್ ಹಾಜಿ, ಪಿ.ಎಂ.ಉಸ್ಮಾನ್ ಹಾಜೀ, ಹಸನಬ್ಬಾ ಹಾಜಿ ಮಂಗಳಪೇಟೆ,ಸಯ್ಯಿದ್ ಹಾಜೀ ಸೂರಿಂಜೆ, ಅಬ್ದುಲ್ ರಜಾಕ್ ಕೋಟೆ.

ಚೆಯರ್ಮ್ಯಾನ್ – ಮಮ್ತಾಝ್ ಅಲಿ ಹಾಜಿ*
ಚೀಫ್ ಕನ್ವೀನರ್ ಅಬ್ದುಲ್‌ರಹ್ಮಾನ್ ಪ್ರಿಂಟೆಕ್, ಕೋಶಾಧಿಕಾರಿ – ಅಶ್ರಫ್ ಅಲ್’ಬದ್ರಿಯಾ ಕಾನ. ವೈಸ್ ಚೆಯರ್ಮ್ಯಾನ್ -ಫಾರೂಖ್ ಸಖಾಫಿ ಕಾಟಿಪಳ್ಳ, ಅಮೀರ್ ವೆಲ್ಕಂ.

ವೈಸ್ ಕನ್ವೀನರ್- ಸಂಶುದ್ದೀನ್ ಹಾಜಿ, ಮುಹಮ್ಮದ್ ಆಸೀಫ್.

ವ್ಯವಸ್ಥಾಪಕ ವಿಭಾಗದಲ್ಲಿ : ಹಾಜೀ ಸತ್ತಾರ್,
ಅಬೂಬಕರ್ ಪ್ಯಾರಡೈಸ್, ಅಯಾಝ್ ಎಕ್ಸ್.ಕಾರ್ಪೊರೇಟರ್,
ತೋಟ ಮುಹಮ್ಮದ್ ಅಲೀ, ಟಿ.ಎಂ.ಅಬೂಬಕರ್ ಪ್ಯಾರಾಡೈಸ್, ಹಿದಾಯತುಲ್ಲಾಹ್, ಹಮೀದ್ ಕಟ್ಲ.
ಈ ಕಾರ್ಯಕ್ರಮದಲ್ಲಿ ಹಾಜಿ ಅಬ್ದುಲ್ ಜಲೀಲ್ ಅಧ್ಯಕ್ಷರು ಬದ್ರಿಯ ಕೃಷ್ಣಾಪುರ, ಹಾಜಿ ಬಿ. ಎ ನಝೀರ್ ಕೃಷ್ಣಾಪುರ, ಜನಾಬ್ ಅಯ್ಯೂಬ್ ಕಾಟಿಪಳ್ಳ(ಅಧ್ಯಕ್ಷರು,ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ), ಜನಾಬ್ ಅಬ್ದುಲ್ ಹಮೀದ್(ಅಧ್ಯಕ್ಷರು SMA ರೀಜ಼ನಲ್,ಸುರತ್ಕಲ್), ಜನಾಬ್ ಐ ಯಹ್’ಕೂಬ್ ಸುರತ್ಕಲ್, ಜನಾಬ್ ಸೈಫುಲ್ಲ ಕಾಟಿಪಳ್ಳ(ಸಂಚಾಲಕರು,ಸರ್ವ ಸಂಘಟನೆಗಳ ಒಕ್ಕೂಟ,ಕಾಟಿಪಳ್ಳ), ಕೆ,ಕೆ,ಎಂ ಮುಹಿಯುದ್ದೀನ್ ಕಾಮಿಲ್ ಸಖಾಫಿ (ಅಧ್ಯಕ್ಷರು SEDC ಕರ್ನಾಟಕ),ನವಾಝ್ ಸಖಾಫಿ ಅಡ್ಯಾರ್ ಪದವು(ಅಧ್ಯಕ್ಷರು,SSF ದ.ಕ ವೆಸ್ಟ್ ಜಿಲ್ಲೆ),ಹೈದರ್ ಅಲಿ (ಕಾರ್ಯದರ್ಶಿ SSF ವೆಸ್ಟ್ ಜಿಲ್ಲೆ),ಹಬೀಬ್ ಸಖಾಫಿ (ಅಧ್ಯಕ್ಷರು SYS ಸೆಂಟರ್),ಅದ್ದು ಹಾಜಿ, ಮುಹಮ್ಮದ್ ಆಸೀಫ್ ಮುಂತಾದವರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com