janadhvani

Kannada Online News Paper

ಕಾಲಿನಲ್ಲಿ ಖುರ್ಆನ್ ಸೂಕ್ತವನ್ನು ಹಚ್ಚಿ ಹಾಕಿಸಿದ ಮಹಿಳೆ- ಬಂಧನ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಕುವೈತ್ ಸಿಟಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ವಿದೇಶಿ ಮಹಿಳೆಯ ವಿರುದ್ಧ ಕುವೈತ್ ನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಬ್ರಿಟಿಷ್ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ ಎಂದು ಕುವೈತ್‌ನ ಆನ್‌ಲೈನ್ ನ್ಯೂಸ್ ಪೋರ್ಟಲ್,ಟೈಮ್ಸ್ ಆಫ್ ಕುವೈಟ್ (https://www.timeskuwait.com/), ವರದಿ ಮಾಡಿದೆ.

ಪ್ರಕರಣದ ದೂರುದಾರ ಕುವೈತ್ ಪ್ರಜೆ. ದೇಶದ ಆಸ್ಪತ್ರೆಯೊಂದರಲ್ಲಿ ತಾನು ಕಂಡ ಬ್ರಿಟಿಷ್ ಮಹಿಳೆಯೊಬ್ಬರು ತನ್ನ ಕಾಲಿನ ಮೇಲೆ ಖುರ್ಆನ್ ಪದಗಳನ್ನು ಹಚ್ಚೆ ಹಾಕಿಸಿಕೊಂಡಿದ್ದನ್ನು ನೋಡಿದ್ದಾಗಿ ಆರೋಪಿಸಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಂತರ ಅವರನ್ನು ಅವರ ನಿವಾಸದಿಂದ ಬಂಧಿಸಲಾಗಿದೆ.