janadhvani

Kannada Online News Paper

ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಲ್ಲಿ ಇಂಧನ ಬೆಲೆಯಲ್ಲಿ 50 ರೂ.ಇಳಿಕೆ- ಶಿವಸೇನಾ ಸಂಸದ

ಉಪ ಚುನಾವಣೆಯಲ್ಲಿ ಸೋಲುಂಡ ಬಿಜೆಪಿ, ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿದೆ. ಇದನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು

ಮುಂಬೈ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ ಕ್ರಮವಾಗಿ 5, ಮತ್ತು 10 ರೂ.ನಷ್ಟು ಕೇಂದ್ರ ಸರ್ಕಾರ ಕಡಿತ ಮಾಡಿದ ಬೆನ್ನಲ್ಲೇ, ಗುರುವಾರ ಹೇಳಿಕೆ ನೀಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ಇಂಧನ ಬೆಲೆಯನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಬೆಲೆ 100ರೂ. ಗೆ ಏರದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು. ದೇಶದಲ್ಲಿ ಕೆಲ ದಿನಗಳಿಂದ ಪೆಟ್ರೋಲ್ ಬೆಲೆ ರೂ.100 ಗಿಂತ ಅಧಿಕವಾಗಿದೆ. ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿರುವುದರಿಂದ ಯಾವುದೇ ಉದ್ದೇಶ ಸಾಧಿಸಿದಂತಲ್ಲ, ಅದನ್ನು ಕನಿಷ್ಠ 25ಕ್ಕೆ ರೂ.ಗೆ ತದನಂತರ 50 ರೂ.ಗೆ ಇಳಿಸಬೇಕು ಎಂದು ರಾವತ್ ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯಲ್ಲಿ 5 ರೂ. ಕಡಿತ ಮಾಡಿದೆ. ಇದನ್ನು 50 ರೂ.ಗೆ ಇಳಿಸಲು ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಬೇಕು ಎಂದರು.ಜನರು ಸಾಲ ಪಡೆದು ದೀಪಾವಳಿ ಆಚರಿಸಬೇಕಾಗಿದೆ. ಹಣದುಬ್ಬರ ಕಾರಣದಿಂದ ಹಬ್ಬದ ವಾತವಾರಣ ಇಲ್ಲದಂತಾಗಿದೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಸಂಜಯ್ ರಾವತ್ ಹೇಳಿದರು.

error: Content is protected !! Not allowed copy content from janadhvani.com