ರಿಯಾದ್: ಸೌದಿ ಅರೇಬಿಯಾದಲ್ಲಿ ಅಧಿಕಾರಿಗಳು ಮೊಬೈಲ್ ಅಂಗಡಿಗಳಲ್ಲಿ ತಪಾಸಣೆ ನಡೆಸಿದ್ದು, ವಿವಿಧ ಇಲಾಖೆಗಳ ಜಂಟಿ ತಂಡವು ನಿನ್ನೆ ಪೂರ್ವ ರಿಯಾದ್‌ನಲ್ಲಿರುವ ಮೊಬೈಲ್ ಸೂಕ್‌ಗೆ ಭೇಟಿ ನೀಡಿದೆ.ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ 28 ವಲಸಿಗರನ್ನು ಬಂಧಿಸಲಾಗಿದೆ. ಅವರನ್ನು ಗಡಿಪಾರು ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ರಿಯಾದ್ ಶಾಖೆಯ ಅಧಿಕಾರಿಗಳು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತಪಾಸಣೆ ನಡೆಸಿದರು. ದೇಶದಲ್ಲಿ ಸ್ವದೇಶೀಕರಣ ಮತ್ತು ಕಾರ್ಮಿಕ ಕಾನೂನುಗಳು ಜಾರಿಯಾಗುತ್ತಿವೆಯೇ ಎಂಬುದನ್ನು ಪರಿಶೀಲಿಸುವ ವಿಶೇಷ ಸಮಿತಿಯು ಪರಿಶೀಲನೆಯಲ್ಲಿ ಭಾಗವಹಿಸಿದೆ.
ಪ್ರಾಯೋಜಕತ್ವದ ಹೊರಗೆ ಕೆಲಸ, ಸಂದರ್ಶಕರ ವೀಸಾದಲ್ಲಿ ಕೆಲಸ, ಪರವಾನಗಿ ಇಲ್ಲದೆ ಕೆಲಸ ಮತ್ತು ಸ್ವದೇಶೀಕರಣಗೊಂಡ ಕೆಲಸದಲ್ಲಿ ಪ್ರಾಯೋಜಕತ್ವದ ಹೊರಗೆ ಕೆಲಸ ಮಾಡಿದ ಆರೋಪದ ಮೇಲೆ ವಲಸಿಗರನ್ನು ಬಂಧಿಸಲಾಗಿದೆ. ಸುಮಾರು ಹತ್ತಕ್ಕೂ ಮಿಕ್ಕ ವ್ಯವಹಾರ ಸಂಸ್ಥೆಗಳಲ್ಲಿ ಉಲ್ಲಂಘನೆ ಕಂಡುಬಂದಿದೆ. ಅವರಿಗೆ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ. ಬಂಧಿತರಿಗೆ ಶಿಕ್ಷೆ ವಿಧಿಸಿ, ನಂತರ ದೇಶದಿಂದ ಗಡೀಪಾರು ಮಾಡಲು ಭದ್ರತಾ ಪಡೆಗಳಿಗೆ ಹಸ್ತಾಂತರಿಸಲಾಗಿದೆ.