janadhvani

Kannada Online News Paper

ಪ್ರವಾದಿ ನಿಂದಕನನ್ನು ಶೀಘ್ರ ಬಂಧಿಸುವಂತೆ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಆಗ್ರಹ

ಸೋಶಿಯಲ್ ಮೀಡಿಯಾ ಮೂಲಕ ಹೀಯಾಳಿಸಿದ ಜಗದೀಶ ಐವರ್ನಾಡು ಎಂಬ ಕೋಮುವಾದಿ ನೀಚನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು.

ಸುಳ್ಯ : ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಸ. ಅ ರನ್ನು ನಿಂದಿಸಿರುವ ಕಿಡಿಗೇಡಿಯ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವಂತೆ ಸುಳ್ಯ ಎಸ್ಸೆಸ್ಸೆಫ್ ಆಗ್ರಹಿಸಿದೆ.

ಪರಧರ್ಮವನ್ನು ನಿಂದಿಸಬೇಡಿ ಅದು ನಿಮ್ಮ ಧರ್ಮ ವನ್ನು ನಿಂದಿಸಲು ಕಾರಣವಾಗಬಹುದು ಎಂಬ ಪವಿತ್ರ ಸಂದೇಶವನ್ನು ಕಲಿಸಿದ ಇಸ್ಲಾಮಿನ ಸಂದೇಶವಾಹಕರಾದ ಕೋಟ್ಯಾಂತರ ಮುಸಲ್ಮಾನರು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರವರನ್ನು ಸೋಶಿಯಲ್ ಮೀಡಿಯಾ ಮೂಲಕ ಹೀಯಾಳಿಸಿದ ಜಗದೀಶ ಕೈವಲ್ತಡ್ಕ ಐವರ್ನಾಡು ಎಂಬ ಕೋಮುವಾದಿ ನೀಚನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು.

ಇಂತಹ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ ನಾಡಿನ ಸೌಹಾರ್ದತೆಯನ್ನು ಕಾಪಾಡಬೇಕಾಗಿದೆ. ಯಾವುದೇ ಕಾರಣಕ್ಕೂ ಪೋಲೀಸ್ ಇಲಾಖೆಯು ಈತನನ್ನು ದಯೆಯಿಂದ ಕಾಣಬಾರದಾಗಿಯೂ, ಶೀಘ್ರವೇ ಬಂದಿಸಬೇಕೆಂದೂ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿಯು ಆಗ್ರಹಿಸುತ್ತದೆ ಎಂದು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್‌ರಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈತ KVG ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉದ್ಯೋಗಿಯಾಗಿದ್ದಾನೆಂದು ತನ್ನ ಫೇಸ್ಬುಕ್ ಪೇಜಿನಲ್ಲಿ ಉಲ್ಲೇಸಿದ್ದಾನೆ.

error: Content is protected !! Not allowed copy content from janadhvani.com