janadhvani

Kannada Online News Paper

ರಾಜ್ಯದಲ್ಲಿ ಪೆಟ್ರೋಲ್‌ ದರ 95.50 ಮತ್ತು ಡೀಸೆಲ್‌ ದರ 81.50ಗೆ ಇಳಿಕೆ…?

ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಿಗೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆ ಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ

ನವದೆಹಲಿ: ಕೇಂದ್ರ ಸರ್ಕಾರವು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹10, ಪೆಟ್ರೋಲ್ ಮೇಲಿನ ಎಕ್ಸೈಸ್ ಸುಂಕವನ್ನು ಲೀಟರಿಗೆ ₹5 ತಗ್ಗಿಸಿದೆ. ಕೇಂದ್ರದ ನಿರ್ಧಾರ ಪ್ರಕಟವಾದ ಬೆನ್ನಿಗೇ ರಾಜ್ಯ ಸರ್ಕಾರಗಳು ಸಹ ಗ್ರಾಹಕರ ಮೇಲೆ ತೈಲದ ತೆರಿಗೆ ಹೊಣೆಯನ್ನು ಕಡಿತಗೊಳಿಸಲು ತೀರ್ಮಾನಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರಿಗೆ ಗರಿಷ್ಠ ₹7ರ ವರೆಗೂ ಕಡಿಮೆ ಮಾಡುತ್ತಿದ್ದು, ಇದರಿಂದಾಗಿ ಡೀಸೆಲ್‌ ದರ ₹17ರಷ್ಟು ಮತ್ತು ಪೆಟ್ರೋಲ್‌ ₹12ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

ಕರ್ನಾಟಕ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ತಲಾ ₹7ರಷ್ಟು ಇಳಿಕೆ ಮಾಡುವುದಾಗಿ ಪ್ರಕಟಿಸಿದೆ. ತೆರಿಗೆ ಕಡಿತ ಗುರುವಾರ ಸಂಜೆಯಿಂದಲೇ ಅನ್ವಯವಾಗಲಿದೆ. ಇದರಿಂದ ರಾಜ್ಯದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹ 95.50 ಮತ್ತು ಪ್ರತಿ ಲೀಟರ್‌ ಡೀಸೆಲ್‌ ದರ ₹ 81.50ಗೆ ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂದರೆ, ರಾಜ್ಯದಲ್ಲಿ ಪೆಟ್ರೋಲ್‌ 12 ರೂಪಾಯಿ ಮತ್ತು ಡೀಸೆಲ್‌ 17 ರೂಪಾಯಿ ಇಳಿಕೆಯಾಗಲಿದೆ.

error: Content is protected !! Not allowed copy content from janadhvani.com