janadhvani

Kannada Online News Paper

ಸೌದಿ ಪ್ರಜೆಗಳ ಹೆಸರಿನಲ್ಲಿ ವ್ಯಾಪಾರ: ಬೇನಾಮಿ ಉದ್ಯಮಿಗಳ ವಿರುದ್ಧ ಕಠಿಣ ಕಾನೂನು

ಕಿರಾಣಿ ಅಂಗಡಿ(ಗ್ರೋಸರಿ) , ಕ್ಷೌರಿಕ ಅಂಗಡಿ ಮತ್ತು ಗ್ಯಾಸ್ ಸ್ಟೇಷನ್ ವಲಯದಲ್ಲಿ ಬೇನಾಮಿ ವ್ಯವಹಾರಗಳು ನಡೆಯುತ್ತಿರುವುದು ಕಂಡುಬಂದಿದೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಬೇನಾಮಿ ಉದ್ಯಮಿಗಳಿಗೆ ಕಡಿವಾಣ ಬೀಳಲಿದೆ. ಸೌದಿ ಅರೇಬಿಯಾದಲ್ಲಿ ವಿದೇಶಿಗರು ಸ್ವದೇಶಿ ಪ್ರಜೆಗಳ ಸೋಗಿನಲ್ಲಿ ವ್ಯಾಪಾರ ಮಾಡುವುದು ದೊಡ್ಡ ಅಪರಾಧ. ಫೆಬ್ರವರಿ 2022 ರ ನಂತರ, ಬೇನಾಮಿ ವ್ಯವಹಾರಗಳನ್ನು ಗುರುತಿಸಲು ಬಲವಾದ ತಪಾಸಣೆ ಮತ್ತು ಕಾರ್ಯವಿಧಾನಗಳನ್ನು ಪ್ರಾರಂಭಿಸಲಾಗುವುದು.

ದೇಶದಲ್ಲಿ ಅಸ್ತಿತ್ವದಲ್ಲಿರುವ ಹೆಚ್ಚಿನ ಬೇನಾಮಿ ವ್ಯವಹಾರಗಳು, ಕಿರಾಣಿ ಅಂಗಡಿ(ಗ್ರೋಸರಿ) , ಕ್ಷೌರಿಕ ಅಂಗಡಿ ಮತ್ತು ಗ್ಯಾಸ್ ಸ್ಟೇಷನ್ ವಲಯದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಕೌನ್ಸಿಲ್ ಆಫ್ ಸೌದಿ ಚೇಂಬರ್ಸ್ ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ಸಂಶೋಧನೆಗಳು ನಡೆದಿವೆ. ಕಿರಾಣಿ ಅಂಗಡಿ, ಕ್ಷೌರಿಕ ಅಂಗಡಿ ಮತ್ತು ಗ್ಯಾಸ್ ಸ್ಟೇಷನ್ ಸಂಪೂರ್ಣವಾಗಿ ಬೇನಾಮಿ ಆಧಾರದ ಮೇಲೆ ನಡೆಯುತ್ತಿವೆ.

ಈ ವಲಯದಲ್ಲಿ ಶೇ.100ರಷ್ಟು ಬೇನಾಮಿ ವ್ಯವಹಾರ ನಡೆದಿರುವುದು ಕಂಡುಬಂದಿದೆ ಎಂದು ಕೌನ್ಸಿಲ್ ಆಫ್ ಚೇಂಬರ್ಸ್ ನ ವಾಣಿಜ್ಯ ಸಮಿತಿ ಅಧ್ಯಕ್ಷ ಹನಿ ಅಲ್-ಅಫ್ಲಾಕ್ ಹೇಳಿದ್ದಾರೆ. ಅದನ್ನು ಪತ್ತೆ ಹಚ್ಚಲು ವಿಶೇಷ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.

error: Content is protected !! Not allowed copy content from janadhvani.com