janadhvani

Kannada Online News Paper

ಮಜ್ಲಿಸುದ್ದ ಅವತಿಲ್ ಇಸ್ಲಾಮಿಯ್ಯಾ ಕರ್ನಾಟಕ- ನೂತನ ಸಾರಥಿಗಳು

ಬಹು:ಶೈಖುನಾ ಮರ್ಹೂಂ N M ಉಸ್ತಾದರ ಶಿಷ್ಯಂದಿರ ಸಂಘಟನೆಯಾದ ಮಜ್ಲಿಸ್ಸುದ್ದ ಅವತ್ತಿಲ್ ಇಸ್ಲಾಮಿಯ್ಯ ಇದರ ವತಿಯಿಂದ ಶೈಖುನಾ N M ಉಸ್ತಾದರ 7ನೇ ಆಂಡ್ ನೇರ್ಚೆ, ಅನುಸ್ಮರಣಾ ಕಾಯರ್ಕಮ ಹಾಗೂ ಮಹಾಸಭೆಯು ಬಹು ಟಿ ಎಂ ಮು‌ಹೀಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಉಸ್ತಾದರ ಅಧ್ಯಕ್ಷತೆಯಲ್ಲಿ 2021ಅಕ್ಟೋಬರ್ 30 ರಂದು ಶನಿವಾರ ಪೂರ್ವಾಹ್ನ 11:00 ಗಂಟೆಗೆ ಸರಿಯಾಗಿ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನಚ್ಚಬೆಟ್ಟವಿನಲ್ಲಿ ನಡೆಯಿತು.

ಖತಮುಲ್ ಕುರ್ಆನ್ ನೊಂದಿಗೆ ಆರಂಭಿಸಿ ಮೌಲೂದ್ ಪಾರಾಯಣ ನಡೆಸಿ ಪ್ರಾಥನೆ ಮೂಲಕ ಮಜ್ಲಿಸ್ ಗೆ ಚಾಲನೆ ನೀಡಲಾಯಿತು. ನಂತರ ಅನುಸ್ಮರಣೆ ಸಭೆ ನಡೆಯಿತು.ಪ್ರಸ್ತುತ ಸಭೆಯನ್ನು ಬಹು:ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯ ಸ್ವಾಗತಿಸಿ, ಬಹು:ಡಿ ಕೆ ಉಮರ್ ಸಖಾಫಿ ಕಂಬಳಬೆಟ್ಟು ಸಭೆಯನ್ನು ಉದ್ಗಾಟಿಸಿದರು.

ಸಮಿತಿಯ ನೂತನ ಸಾರಥಿಗಳು

ಅಧ್ಯಕ್ಷರು: ಕೆ ಎ ಅಶ್ರಫ್ ಸಖಾಫಿ ಅಲ್ ಫುರ್ಖಾನಿ ಕಕ್ಕಿಂಜೆ

ಪ್ರಧಾನ ಕಾರ್ಯದರ್ಶಿ: ಪಿ.ಎಂ ಉಸ್ಮಾನ್ ಝುಹ್ರಿ ಕಿನ್ಯ

ಕೋಶಾಧಿಕಾರಿ: ಖಾಸಿಂ ಲತೀಫಿ ಮಂಜನಾಡಿ

ಉಪಾಧ್ಯಕ್ಷರುಗಳು:ಮೆಹಬೂಬ್ ರಹ್ಮಾನ್ ಸಖಾಫಿ ಕಿನ್ಯ, ಇಸ್ಮಾಯಿಲ್ ಸಖಾಫಿ ಬೈತಡ್ಕ

ಕಾರ್ಯದರ್ಶಿಗಳು:ಅಬೂಬಕ್ಕರ್ ಸಅದಿ ಮಂಜನಾಡಿ, ಆಸಫ್ ಅಹ್ಸನಿ ಕನ್ಯಾರಕೋಡಿ,

ಸದಸ್ಯರು:ಟಿ ಎಂ ಮುಹೀಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ,ಎಂ ಬಿ ಅಬೂಬಕ್ಕರ್ ಸಖಾಫಿ ಬಾಳೆಪುಣಿ , ಪಿ ಸಿ ಅಬೂಬಕ್ಕರ್ ಸಅದಿ ಪಲ್ಲಮಜಲ್(ಸೌದಿ ಅರೇಬಿಯಾ),ಅಶ್ರಫ್ ಸಖಾಫಿ ಕಿನ್ಯಾ,ಮುಖ್ತಾರ್ ಸಖಾಫಿ ಕೋಡಿ, ಅಬ್ದುಲ್ ರಹಿಮಾನ್ ಸಖಾಫಿ ಮಂಜನಾಡಿ, ಕೆ ಎಚ್ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ(ದುಬೈ), ಹಂಝ ಝಹ್ರಿ ವಿಟ್ಲ,ರಿಯಾಝ್ ಸಅದಿ ಗುರುಪುರ, ಶರೀಫ್ ಸಅದಿ ಸಂಬಾರ್ ತೋಟ,ಹಕೀಂ ಮುಸ್ಲಿಯಾರ್ ಮಂಜನಾಡಿ ,ಇನ್ನು ಕರ್ನಾಟಕದ ಬಾಕಿಯಿರುವ ಶೈಖುನಾ ಉಸ್ತಾದರ ಎಲ್ಲಾ ಶಿಷ್ಯಂದಿರು ಒಳಗೊಂಡಿರುತ್ತಾರೆ ಎಂದು ತೋಕೆ ಉಸ್ತಾದರು ಘೋಷಣೆ ಮಾಡಿ. ಪಿ ಸಿ ಅಬೂಬಕ್ಕರ್ ಸಅದಿ, ಪಲ್ಲಮಜಲು,ಇಸ್ಮಾಯಿಲ್ ಸಖಾಫಿ ಬೈತಡ,ಅಬೂಬಕ್ಕರ್ ಸಆದಿ ಮಂಜನಾಡಿ. ಆಶಂಸ ಬಾಷಣಗೈದರು.ಕೊನೆಯಲ್ಲಿ ಉಸ್ಮಾನ್ ಝುಹ್ರಿ ಕಿನ್ಯ ಧನ್ಯವಾದ ಹೇಳಿದರು.

ವರದಿ: ಕೆ ಎಚ್ ಎ ಮಂಜನಾಡಿ