ರಿಯಾದ್: ಪ್ರಸ್ತುತ, ಸೌದಿ ಅರೇಬಿಯಾದಲ್ಲಿ ವಲಸಿಗರಿಗೆ ಇಕಾಮಾ ಅಥವಾ ನಿವಾಸ ಪರವಾನಗಿಯನ್ನು ಕನಿಷ್ಠ ಒಂದು ವರ್ಷಕ್ಕೆ ನವೀಕರಿಸಲಾಗುತ್ತಿದೆ.ಈ ನಿಟ್ಟಿನಲ್ಲಿ ಅನೇಕ ಉದ್ಯೋಗದಾತರು ಮತ್ತು ವಿದೇಶಿಗರು ಲೆವಿ ಸೇರಿದಂತೆ ಭಾರಿ ಮೊತ್ತವನ್ನು ಪಾವತಿಸಲು ಹೆಣಗಾಡುತ್ತಿದ್ದಾರೆ.
ತ್ರೈಮಾಸಿಕ ಇಖಾಮಾ ನವೀಕರಣೆ ವ್ಯವಸ್ಥೆ ಜಾರಿಯಿಂದ ಉದ್ಯೋಗದಾತರು ಹಾಗೂ ವಿದೇಶೀಯರು ನಿರಾಳರಾಗುವರು.ಇದರ ಭಾಗವಾಗಿ, ಬ್ಯಾಂಕ್‌ಗಳಲ್ಲಿ ಕನಿಷ್ಠ ಅವಧಿಯ ಪಾವತಿ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವರದಿಯಾಗಿದೆ.
ಇಖಾಮಗಳ ವಿತರಣೆ ಮತ್ತು ನವೀಕರಣೆ ಅವಧಿ, ಕನಿಷ್ಠ ಮೂರು ತಿಂಗಳು ಎಂಬ ಹೊಸ ಪಾವತಿ ವ್ಯವಸ್ಥೆಯನ್ನು ಕ್ರಮೀಕರಿಸಲಾಗುತ್ತಿದೆ. ಇತ್ತೀಚೆಗೆ ಪರಿಷ್ಕರಿಸಲಾದ ಸರ್ಕಾರಿ ಪಾವತಿ ವ್ಯವಸ್ಥೆಯಲ್ಲಿ, ಇಖಾಮಾ ಶುಲ್ಕವನ್ನು ಮೂರು ಅಥವಾ ಆರು ತಿಂಗಳಲ್ಲಿ ಪಾವತಿಸಬಹುದು.
ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಅಬ್ಶೀರ್ ಬ್ಯುಸಿನೆಸ್, ಮುಖೀಮ್ ಮತ್ತು ಕಿವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಅಗತ್ಯವಿರುವ ಅವಧಿಗೆ ಇಖಾಮಾಗಳನ್ನು ನೀಡುವ ಮತ್ತು ನವೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇದರಿಂದ ಸಾಧ್ಯವಾಗಲಿದೆ.