janadhvani

Kannada Online News Paper

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಒಂದಕ್ಕೆ 266₹ ಹೆಚ್ಚಳವಾಗಿದ್ದು, ಹೊಸ ದರ ಇಂದಿನಿಂದ ಅನ್ವಯವಾಗಲಿದೆ.

ಇಂದಿನ ದರ ಹೆಚ್ಚಳದ ನಂತರ 19kg ತೂಕದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ದೆಹಲಿಯಲ್ಲಿ 2,000₹ ಮುಂಬೈಯಲ್ಲಿ 1,950₹ ಕೊಲ್ಕತ್ತಾದಲ್ಲಿ 2,073 ಚೆನ್ನೈಯಲ್ಲಿ 2,133₹ ಆಗಲಿದೆ.

ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ ಆಗದಿದ್ದರೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳು, ಬೇಕರಿ ತಿಂಡಿ ಗಳ ದರಗಳಲ್ಲಿ ಏರಿಕೆಯಾಗಲಿರುವ ಸಾಧ್ಯತೆಗಳಿವೆ.

ಕೇಂದ್ರ ಸರಕಾರದಿಂದ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುವುದರಿಂದ ಬಡವರು ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.