ರಿಯಾದ್ : ಮಾರ್ಕೆಟಿಂಗ್ ಮತ್ತು ಅಡ್ಮಿನ್ ಉದ್ಯೋಗಿಗಳಲ್ಲಿ ಶೇಕಡಾ 30 ರಷ್ಟು ಸ್ವದೇಶೀಕರಣಗೊಳಿಸುವಂತೆ ಸೌದಿ ಕಾರ್ಮಿಕ ಸಚಿವಾಲಯ ಹೇಳಿದೆ.
ಐದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕಂಪನಿಗಳಿಗೆ ಈ ಆದೇಶ ಅನ್ವಯಿಸುತ್ತದೆ. ಪ್ರತ್ಯೇಕವಾಗಿ ಹೆಚ್ಚಿನ ಕಚೇರಿ ಕೆಲಸಗಳನ್ನು ಸ್ಥಳೀಯರಿಗೆ ಮೀಸಲಿಡುವಂತೆ ಸಚಿವಾಲಯ ಆದೇಶಿಸಿದೆ. ಆದೇಶವು ಮೇ 8, 2022 ರಿಂದ ಜಾರಿಗೆ ಬರಲಿದೆ.
ಮ್ಯಾನೇಜರ್, ಮಾರ್ಕೆಟಿಂಗ್ ಸ್ಪೆಷಲಿಸ್ಟ್, ಪಿಆರ್ ಡೈರೆಕ್ಟರ್, ಮಾರ್ಕೆಟಿಂಗ್ ಸೇಲ್ಸ್ ಎಕ್ಸ್ಪರ್ಟ್, ಆಡ್ ಡಿಸೈನರ್ ಮತ್ತು ಫೋಟೋಗ್ರಾಫರ್ ಹುದ್ದೆಗಳಲ್ಲಿ ಮೊದಲನೇಯದಾಗಿ ಸ್ವದೇಶೀಕರಣವನ್ನು ಘೋಷಿಸಲಾಗಿದೆ. ಕನಿಷ್ಠ ವೇತನ 5500 ರಿಯಾಲ್ ಆಗಿರುತ್ತದೆ.
ಇದರೊಂದಿಗೆ 12,000 ಸೌದಿ ಪ್ರಜೆಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಸೌದೀಕರಣವನ್ನು ಜಾರಿಗೊಳಿಸುವ ಕಂಪನಿಗಳಿಗೆ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ. ಬಹುತೇಕ ಕಚೇರಿ ಕೆಲಸಗಳನ್ನು ಸ್ಥಳೀಯರಿಗಾಗಿ ನಿಗದಿಪಡಿಸಲಾಗಿದೆ. ಕಾರ್ಯದರ್ಶಿ,ಟ್ರಾನ್ಸ್ಲೇಟರ್, ಇನ್ವೆಂಟರಿ ಕಸ್ಟೋಡಿಯನ್ಸ್ ಮತ್ತು ಡೇಟಾ ಎಂಟ್ರಿ ವೃತ್ತಿಗಳಿಗೆ ಆದೇಶವು ಅನ್ವಯಿಸುತ್ತದೆ. ಕನಿಷ್ಠ ವೇತನವನ್ನು ಐದು ಸಾವಿರ ರಿಯಾಲ್‌ಗಳಿಗೆ ನಿಗದಿಪಡಿಸಲಾಗಿದೆ.
ಈ ಆದೇಶವು ಮೇ 8, 2022 ರಿಂದ ಜಾರಿಗೆ ಬರಲಿದೆ. ಇದು ಸೌದಿಗಳಿಗೆ 20,000 ಉದ್ಯೋಗಗಳನ್ನು ಸೃಷ್ಟಿಸುತ್ತದೆ.