janadhvani

Kannada Online News Paper

ನಿರ್ಬಂಧ ತೆರವು: ನಿರಂತರ ಉಮ್ರಾ ನಿರ್ವಹಿಸಲು ಅವಕಾಶ- 15 ದಿನ ಕಾಯಬೇಕಾಗಿಲ್ಲ

ಹಜ್ ಉಮ್ರಾ ಆ್ಯಪ್‌ನಲ್ಲಿ ಉಮ್ರಾ ಪರವಾನಗಿಯನ್ನು ತ್ವರಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ರಿಯಾದ್: ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ಎರಡನೇ ಉಮ್ರಾ ನಿರ್ವಹಿಸಲು ಇನ್ನು 15 ದಿನ ಕಾಯುವ ಅವಶ್ಯಕತೆಯನ್ನು ಮನ್ನಾ ಮಾಡಲಾಗಿದೆ. ಹಜ್ ಉಮ್ರಾ ಆ್ಯಪ್‌ನಲ್ಲಿ ಉಮ್ರಾ ಪರವಾನಗಿಯನ್ನು ತ್ವರಿತವಾಗಿ ನೀಡುವ ವ್ಯವಸ್ಥೆ ಮಾಡಲಾಗಿದೆ.

ಮದೀನಾದ ರವ್ಳಾ ಪ್ರವೇಶಕ್ಕೆ ಏರ್ಪಡಿಸಿದ್ದ ನಿರ್ಬಂಧಗಳನ್ನೂ ಕೈಬಿಡಲಾಗಿದೆ.ತವಾಕ್ಕಲ್ನಾ ಮತ್ತು ಇಅ್ ತಮರ್ನಾ ಆ್ಯಪ್‌ಗಳ ಮೂಲಕ ಪರವಾನಗಿ ಪಡೆಯಬೇಕು.

ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉಮ್ರಾ ನಿರ್ವಹಿಸಲು ನಿಯಂತ್ರಣ ಏರ್ಪಡಿಸಲಾಗಿತ್ತು.ಒಮ್ಮೆ ಉಮ್ರಾ ಪರವಾನಗಿಯನ್ನು ಪಡೆದ ನಂತರ,ಮತ್ತೆ ಪಡೆಯಲು 15 ದಿನ ಕಾಯಬೇಕಾಗಿತ್ತು. ಈ ನಿಯಮವನ್ನು ತೆಗೆದುಹಾಕಲಾಗಿದೆ. ಪವಿತ್ರ ಹರಮ್‌ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ.