ಇನ್ನೂ ಈ ಬಂದ್ ಗೆ ವ್ಯಾಪಕ ಬೆಂಬಲ ದೊರೆಯುತ್ತಿದ್ದು, ಕರ್ನಾಟಕದಲ್ಲೂ ರೈತ ಸಂಘಟನೆಗಳಿಂದ ಭಾರತ್ ಬಂದ್ಗೆ ಸಾಥ್ ನೀಡಲಾಗುತ್ತಿದೆ. ಸೋಮವಾರ ಭಾರತ್ ಬಂದ್ ಜೊತೆ ಕರ್ನಾಟಕ ಬಂದ್ ಇದ್ದು, ಸರ್ಕಾರದ ಕೃಷಿ ಕಾಯ್ದೆ ವಿರುದ್ಧ ರೈತರ ಈ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳು, ಕನ್ನಡ ಸಂಘಟನೆಗಳು ಸಾಥ್ ನೀಡಿದೆ. ಈ ಹೋರಾಟಕ್ಕೆ ಕರ್ನಾಟಕ ಸ್ತಬ್ದವಾಗಲಿದೆ.
ಸೋಮವಾರ ಬೆಳಗ್ಗೆಯಿಂದಲೇ ಬೆಂಗಳೂರಿಗೆ ಪ್ರತಿಭಟನೆ ಬಿಸಿ ತಟ್ಟಲಿದ್ದು, ಬೆಳಗ್ಗೆ 11 ಗಂಟೆಯಿಂದಲೇ ಟೌನ್ ಹಾಲ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಯಲಿದೆ.
ಭಾರತ್ ಬಂದ್ಗೆ ಯಾರೆಲ್ಲಾ ಬೆಂಬಲ..?
ಕಾರ್ಮಿಕ ಸಂಘಟನೆಗಳು, ಕನ್ನಡ ಸಂಘಟನೆಳು, ಕರವೇ ನಾರಾಯಣಗೌಡ ಬಣ, ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ. ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸೇರಿದಂತೆ CITU ರಾಜ್ಯಾಧ್ಯಕ್ಷೆ ವರಲಕ್ಷ್ಮೀಯಿಂದಲೂ ಬೆಂಬಲ ಘೋಷಿಸಿದ್ದಾರೆ. ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟಗಳಿಂದಲೂ ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಆಟೋ ಚಾಲಕರ ಸಂಘ, ಟ್ಯಾಕ್ಸಿ ಚಾಲಕರುಗಳ ಸಂಘ ಕ್ಯಾಬ್ , ಖಾಸಗಿ ಬಸ್ ಮಾಲೀಕರ ಸಂಘದ ಬೆಂಬಲ ಸಾಧ್ಯತೆಗಳಿದೆ.
ರಾಷ್ಟ್ರವ್ಯಾಪಿ ಪ್ರತಿಭಟನೆ ಮತ್ತು ರೈತ ಸಂಘಟನೆಗಳ ನಿರಂತರ ಹೋರಾಟಗಳನ್ನು ನಿರ್ಲಕ್ಷಿಸಿ ರಾಜ್ಯಸಭೆಯಲ್ಲಿ ಗೌಪ್ಯವಾಗಿ ಅನೇಕ ಕಾಯ್ದೆಗಳನ್ನು ಅನುಮೋದಿಸಿದೆ ಈ ಕೇಂದ್ರ ಸರ್ಕಾರ. ಇದರಿಂದಾಗಿ ದೇಶದ ರೈತಾಪಿ ಜನರಿಗೆ ಕೇಂದ್ರ ಸರ್ಕಾರ ದ್ರೋಹ ಬಗೆದಿರುವುದಲ್ಲದೆ ಕೃಷಿ ಚಟುವಟಿಕೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕಾರ್ಮೋರೇಟ್ ದೊರೆಗಳಿಗೆ ವಹಿಸಿಕೊಟ್ಟಂತಾಗಿದೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿರ್ಣಯಿಸುವ ಕುರಿತು ಸಹ ಯಾವುದೇ ಚರ್ಚೆಗೆ ಸರ್ಕಾರ ಮುಂದಾಗಲಿಲ್ಲ ಎಂಬುದು ಅತ್ಯಂತ ಕಳವಳದ ಸಂಗತಿಯಾಗಿದೆ.ಕೃಷಿ ಕಾಯ್ದೆಗಳು, ಎಪಿಎಂಸಿ ರದ್ಧತಿ, ಜೊತೆಯಲ್ಲಿ ನಾಡಿನ ನಾನಾ ವಿಭಾಗದ ಜನರ ನಿತ್ಯ ಜೀವನವನ್ನು ಬಾಧಿಸತಕ್ಕಂತಹ ರೀತಿಯಲ್ಲಿ ವಿದ್ಯುತ್ ಮಸೂದೆಯನ್ನು ಸಹ ಜಾರಿಗೆ ತರಲಾಗಿದೆ.
ಇದೇ ರೀತಿ ಗೋಹತ್ಯೆ ಹೆಸರಿನಲ್ಲಿ ತಮ್ಮ ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ಗ್ರಾಮೀಣ ಜನರಿಗೆ ಮತ್ತು ರೈತರಿಗೆ ತುಂಬಲಾರದಷ್ಟು ನಷ್ಟ ಉಂಟಾಗಿದೆ.
ಅದಕ್ಕಾಗಿ ಕೇಂದ್ರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯು ಇಲ್ಲಿಯವರೆಗೆ ನಡೆಸಿದ ಪ್ರತಿಭಟನೆ, ಹೋರಾಟಗಳಿಗೆ ಸರ್ಕಾರ ಯಾವುದೇ ರೀತಿ ಸ್ಪಂದಿಸದೆ ಇರುವುದರಿಂದ ಸೆ 27 ಎಂದ ರಾಷ್ಟ್ರ ವ್ಯಾಪಿ ಮುಷ್ಕರ, ಹರತಾಳ್ ನಡೆಸಬೇಕೆಂದು ಕರೆ ನೀಡಲಾಗಿದೆ.
ಕಾರ್ಮಿಕರ ಸಂಘಟನಾ ಹಕ್ಕುಗಳು ಮತ್ತು ಹೋರಾಡಿ ಪಡೆದಂತಹ ಇತರೆ ಹಕ್ಕುಗಳನ್ನು ಮೊಟಕುಗೊಳಸುವ ನಿಟ್ಟಿನಲ್ಲಿ ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳನ್ನಾಗಿ ಮಾರ್ಪಡಿಸಿರುವ ಕೇಂದ್ರ ಸರ್ಕಾರದ ನಿರ್ಣಯವು ಸಹ ಕೋಟ್ಯಾನುಗಟ್ಟಲೆ ಕೈಗಾರಿಕಾ ಕ್ಷೇತ್ರದ ಮತ್ತು ಇತರ ಅಸಂಘಟತ ಕ್ಷೇತ್ರದಲ್ಲಿ ದುಡಿಯುವಂತಹ ಕಾರ್ಮಿಕರ ನಿತ್ಯ ಜೀವನವನ್ನು, ಜೀವನದ ಗುಣಮಟ್ಟವನ್ನು ಬಾಧಿಸತಕ್ಕಂತಹ ನಿಟ್ಟನಲ್ಲಿದ್ದು ಈ ಕುರಿತು ಸರ್ಕಾರ ಯಾವುದೇ ರೀತಿ ಚರ್ಚೆಗೆ, ಸಮನ್ವಯಕ್ಕೆ ಮುಂದಾಗದೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿರುವ ಹಿನ್ನೆಲೆಯಲ್ಲೂ ನಾಡಿನ ಒಟ್ಟಾರೆ. ಕಾರ್ಮಿಕ ಸಂಘಟನೆಗಳು ಸಹ ಸೆ 27 ರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದೆ.
ಬೆಂಗಳೂರು,ಸೆ.25: ಕೃಷಿ ಮತ್ತು ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸಲು ನಗದೀಕರಣ ಅಥವಾ ಖಾಸಗೀಕರಣ ನೀತಿಗಳನ್ನು ವಿರೋಧಿಸಿ ನಾಡಿನ ಆರ್ಥಿಕ ವ್ಯವಸ್ಥೆಯನ್ನು ಸಂಪೂರ್ಣ ದಿವಾಳಿಯತ್ತ ಕೊಂಡೊಯ್ಯುತ್ತಿರುವ ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಸೆ 27 ರಂದು ಕರೆ ನೀಡಿರುವ ಭಾರತ್ ಬಂದ್ ಯಶಸ್ವಿಗೊಳಿಸಲು ವಿವಿಧ ಸಂಘಟನೆಗಳ ಮುಖಂಡರು ಮನವಿ ಮಾಡಿದ್ದಾರೆ.