ಕುವೈತ್ ಸಿಟಿ:ಕುವೈತ್‌ನ ಏಳು ವಿಭಾಗದ ಉದ್ಯೋಗಗಳಲ್ಲಿರುವ ಕಾರ್ಮಿಕರಿಗೆ ಇಖಾಮ ಬದಲಾವಣೆಯಿಲ್ಲ ಎಂದು ಮಾನವ ಸಂಪನ್ಮೂಲ ಪ್ರಾಧಿಕಾರವು ಹೇಳಿದೆ.
ಕೈಗಾರಿಕೆ, ಕೃಷಿ, ಮೀನುಗಾರಿಕೆ, ಸಣ್ಣ ಉದ್ಯಮ, ಜಾನುವಾರು ಸಾಕಣೆ , ಸಹಕಾರ ಸಂಘಗಳು ಮತ್ತು ಮುಕ್ತ ವ್ಯಾಪಾರ ವಲಯಗಳು ವೀಸಾ ಬದಲಾವಣೆಯನ್ನು ನಿಷೇಧಿಸಿರುವ ವಿಭಾಗಗಳಾಗಿವೆ.
ಕೋವಿಡ್‌ನ ಹಿನ್ನೆಲೆಯಲ್ಲಿ, ಈ ವಲಯಗಳಲ್ಲಿ ವೀಸಾ ಬದಲಾವಣೆಗೆ ತಾತ್ಕಾಲಿಕ ಅನುಮತಿಯನ್ನು ಮಾರ್ಚ್‌ನಿಂದ ನೀಡಲಾಗಿತ್ತು. ಆದಾಗ್ಯೂ, ಕಾರ್ಮಿಕ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪರಿಗಣಿಸಿ ತಾತ್ಕಾಲಿಕ ಅನುಮತಿಯನ್ನು ಜುಲೈ 15 ರಂದು ಮುಕ್ತಾಯಗೊಳಿಸಲಾಗಿದೆ ಎಂದು ಪ್ರಾಧಿಕಾರದ ವಕ್ತಾರ ಅಸೀಲ್ ಅಲ್-ಮಸಾಯಿದ್ ಹೇಳಿದರು.