ಶಾರ್ಜಾ: ಶಾರ್ಜಾ ಮೂಲದ ವಿಮಾನಯಾನ ಸಂಸ್ಥೆ ಏರ್ ಅರೇಬಿಯಾ 300 ದಿರ್ಹಮ್ ನಲ್ಲಿ ಭಾರತದ ಪ್ರಮುಖ ನಗರಗಳಿಗೆ ಟಿಕೆಟ್ ಘೋಷಿಸಿದೆ.
300 ದಿರ್ಹಮ್ ನಲ್ಲಿ ಆರಂಭವಾಗುವ ಟಿಕೆಟ್ಗಳು ಈಗ ಕೊಚ್ಚಿ ಸೇರಿದಂತೆ 11 ಭಾರತೀಯ ನಗರಗಳಿಗೆ ಲಭ್ಯವಿದೆ. ದೆಹಲಿ, ಮುಂಬೈ ಮತ್ತು ಹೈದರಾಬಾದ್ಗೆ ಕೇವಲ 300 ದಿರ್ಹಮ್ಗಳಿಗೆ ಏಕಮುಖ ಟಿಕೆಟ್ ಲಭ್ಯವಿದೆ.

ಕೋಯಿಕ್ಕೋಡ್ ಮತ್ತು ಚೆನ್ನೈಗೆ AED 310 ಗೆ ಟಿಕೆಟ್ಗಳು ಲಭ್ಯವಿದೆ. ತಿರುವನಂತಪುರಂಗೆ ಟಿಕೆಟ್ ದರ 320 ದಿರ್ಹಮ್. ಅಹ್ಮದಾಬಾದ್ಗೆ 350 ದಿರ್ಹಮ್ಗಳು, ಕೊಯಮತ್ತೂರಿಗೆ 398 ದಿರ್ಹಮ್ಗಳು, ಬೆಂಗಳೂರಿಗೆ 450 ದಿರ್ಹಮ್ಗಳು ಮತ್ತು ಗೋವಾಕ್ಕೆ 600 ದಿರ್ಹಮ್ಗಳಲ್ಲಿ ಟಿಕೆಟ್ ಲಭ್ಯವಿದೆ.







