ಬಂಟ್ವಾಳ:( ಜನಧ್ವನಿ ವಾರ್ತೆ) ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ “ಮತದಾನ ನಮ್ಮ ಹಕ್ಕು ಕಾರ್ಯಕ್ರಮ ” ಇತ್ತೀಚೆಗೆ ದಾರುಲ್ ಇಝ್ಝಾ ಕೌಡೇಲಿನಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಮ್ ಸಖಾಫಿ ಉಸ್ತಾದರು ದುವಾಗೈದು_ _ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕೌಡೇಲ್ ಖತೀಬರಾದ ಮಜೀದ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಆಶಾಂಶ ಭಾಷಣ ಮಾಡಿದರು._ ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಉಸ್ತಾದರು ಮತದಾನದ ಮಹತ್ವವನ್ನು ವಿವರಿಸಿದರು.
ಹದಿನೆಂಟು ವರುಷ ತುಂಬಿದ ಪ್ರತಿಯೊಬ್ಬರಿಗೂ ವಿವೇಚನಾ ಶಕ್ತಿ ಇದೆ. ತಮ್ಮ ರಾಜ್ಯದಲ್ಲಿ ಯಾರು ಆಡಳಿತ ನಡೆಸಬೇಕು, ಯಾವ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿ ಕೊಡಬೇಕೆಂಬ ಜ್ಞಾನ ಪ್ರತಿಯೊಬ್ಬರಿಗೂ ಇದೆ. ಎಸ್ಸೆಸ್ಸೆಫ್ ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸದೆ, ಪ್ರಜಾಪ್ರಭುತ್ವ ಭಾರತದ ಸಂವಿಧಾನವನ್ನು ಗೌರವಿಸಿ ನಾಡಿನ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುವ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕಾಗಿ ಕರೆ ನೀಡಿದರು.
_ಕಾರ್ಯಕ್ರಮದಲ್ಲಿ ಡಿವಿಷನ್ ಪದಾಧಿಕಾರಿಗಳು ಹಾಗೂ ಕಾರ್ಯಾಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು._
*✍🏻 ಹಾರಿಸ್ ಪೆರಿಯಪಾದೆ*