janadhvani

Kannada Online News Paper

ಲಸಿಕೆ ಹಾಕಿಸದ ವಿದೇಶೀಯರಿಗೂ ಪ್ರವೇಶಾನುಮತಿ- 7 ದಿನಗಳ ಕ್ವಾರಂಟೈನ್ ಕಡ್ಡಾಯ

ಮಸ್ಕತ್: ಲಸಿಕೆ ಹಾಕಿಸದ ವಲಸಿಗರಿಗೆ ಒಮಾನ್‌ಗೆ ಮರಳಲು ಅವಕಾಶ ನೀಡಲಾಗಿದೆ. ಒಮಾನ್‌ನ ಸರ್ಕಾರಿ ಮತ್ತು ಖಾಸಗಿ ವಲಯದ ಕೆಲಸಗಾರರಿಗೆ ಲಸಿಕೆ ಹಾಕಿಸದೆಯೂ ಒಮಾನ್‌ಗೆ ಮರಳಲು ಸುಪ್ರೀಂ ಸಮಿತಿಯು ಅನುಮತಿ ನೀಡಿದೆ.ಮಾನ್ಯತೆ ಇರುವ ನಿವಾಸ ವೀಸಾ ಹೊಂದಿರುವ ವಿದೇಶಿಯರು ಮತ್ತು ಒಮಾನ್ ಪ್ರಜೆಗಳು ಲಸಿಕೆ ಇಲ್ಲದೆ ಒಮಾನ್ ಪ್ರವೇಶವನ್ನು ಅನುಮತಿಸಲಾಗಿದೆ.

ಲಸಿಕೆಯನ್ನು ಪಡೆಯದೆ ಒಮಾನ್‌ಗೆ ಆಗಮಿಸುವವರು ಪ್ರಯಾಣಿಸುವ ಮೊದಲು ನಡೆಸಿದ ಪಿಸಿಆರ್ ಪರೀಕ್ಷೆಯ ನೆಗಟಿವ್ ಫಲಿತಾಂಶ ಹೊಂದಿರಬೇಕು. ಒಮಾನ್‌ಗೆ ಬಂದ ನಂತರ,ವಿಮಾನ ನಿಲ್ದಾಣದಲ್ಲೂ ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಏಳು ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್‌ನಲ್ಲಿರಬೇಕು. ಈ ಅವಧಿಯಲ್ಲಿ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಬ್ರೇಸ್ಲೆಟ್ ಧರಿಸಬೇಕು.

ಸ್ಥಳೀಯರು ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಉಳಿಯಬಹುದು. ಆದರೆ ವಿದೇಶಿಯರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಬೇಕು. ಎಂಟನೇ ದಿನ ಪಿಸಿಆರ್ ಪರೀಕ್ಷೆಯನ್ನು ಪುನರಾವರ್ತಿಸಬೇಕು.