janadhvani

Kannada Online News Paper

ಪೇರಮೊಗರು ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ನಿಧನ- SMA ತೀವ್ರ ಸಂತಾಪ

ಪೇರಮೊಗರು ಜಮಾಅತ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯ ನಿರ್ವವಹಿಸುತ್ತಿದ್ದ ಜನಾಬ್ ಇಬ್ರಾಹಿಂ ಹಾಜಿ (60) ನಿನ್ನೆ(ಸೆ.1)ಇಶಾ ನಮಾಝ್ ಬಳಿಕ ಹೃದಯಾಘಾತದಿಂದ ನಿಧನರಾದರು.

ಪೇರಮೊಗರಿನ ಸುನ್ನೀ ಸಂಘಟನೆಗಳ ಮುಂಚೂಣಿ ನಾಯಕರಾಗಿದ್ದ ಅವರು ಧಾರ್ಮಿಕ ಒಲವುಳ್ಳ ಸಾದಾತ್,ಉಲಮಾಗಳನ್ನು ಅತ್ಯಧಿಕವಾಗಿ ಗೌರವಿಸಿ, ಪ್ರೀತಿಸುತ್ತಿದ್ದರು.ಮೂರು ಅವಧಿಗೆ ಸ್ಥಳೀಯ ಜಮಾಅತ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ಹಾಜಿ, ಎಸ್ ವೈ ಎಸ್ ಪೇರಮೊಗರು ಬ್ರಾಂಚ್ ಅಧ್ಯಕ್ಷ, ಎಸ್.ಎಂ.ಎ. ವಿಟ್ಲ ಝೋನಲ್ ಕೋಶಾಧಿಕಾರಿ, ಎಸ್.ಎಂ.ಎ ಮಾಣಿ ನಿಕಟ ಪೂರ್ವ ಅಧ್ಯಕ್ಷ, ಹಾಲಿ ಕೋಶಾಧಿಕಾರಿ, ಎಸ್ ವೈ ಎಸ್ ಮಾಣಿ ಸೆಂಟರ್ ಸದಸ್ಯ ಮುಂತಾದ ಪದವಿಗಳಲ್ಲಿ ಸಕ್ರೀಯವಾಗಿ ತನ್ನನ್ನು ತೊಡಗಿಸಿ ಕೊಂಡಿದ್ದರು.

ಮಡದಿ, ನಾಲ್ಕು ಮಕ್ಕಳು (ಎರಡು ಗಂಡು ಎರಡು ಹೆಣ್ಣು) ಸಹಿತ ಅಪಾರ ಬಂಧು ಬಳಗ, ಹಿತೈಷಿಗಳನ್ನು ಅಗಲಿದ್ದಾರೆ.
ಅವರ ಹೆಸರಲ್ಲಿ ಖುರ್ ಆನ್, ತಹ್ಲೀಲ್, ಮಯ್ಯಿತ್ ನಮಾಝ್ ಮಾಡಲು SYS ಪೇರಮೊಗರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಹನೀಫ್ ಸಖಾಫಿ ವಿನಂತಿಸಿದ್ದಾರೆ.

SMA ಜಿಲ್ಲಾ ಸಮಿತಿ ತೀವ್ರ ಸಂತಾಪ

ಸುನ್ನಿ ಉಮಾರ ನಾಯಕರು
ಪೇರಮೊಗರು ಜಮಾಅತ್ ಆಡಳಿತ ಸಮಿತಿ ಅಧ್ಯಕ್ಷ SMA ವಿಟ್ಲ ಝೋನ್ ಕೋಶಾಧಿಕಾರಿ ಸುನ್ನೀ ಸಂಘಟನೆಗಳಲ್ಲಿ ಸಕ್ರಿಯ ನಾಯಕತ್ವವನ್ನು ನಿರ್ವಹಿಸಿದ ಸೌಮ್ಯ ವ್ಯಕ್ತಿತ್ವದ ಜನಾಬ್ ಇಬ್ರಾಹಿಂ ಹಾಜಿ ಪೇರಮೊಗರು ಅಲ್ಲಾಹನ ಅನುಲ್ಲಂಘನೀಯ ವಿಧಿಗೆ ವಿದಯರಾಗಿದ್ದಾರೆ. ಅವರ ವಿಯೋಗದ ಸುದ್ದಿ ಕೇಳಿ ಬಾರಿ ನೋವು ತಂದಿದೆ ಅವರ ವಿಯೋಗವು ಸುನ್ನಿ ಸಂಘಟನೆಗಳಿಗೆ ತೀರಾ ನಷ್ಟವಾಗಿದೆ. ನಿಧನಕ್ಕೆ SMA ಜಿಲ್ಲಾ ಸಮಿತಿ ತೀವ್ರ ಸಂತಾಪ ಸೂಚಿಸುತ್ತಾ, ಅಲ್ಲಾಹು ಅವರ ಬರ್ಝಖೀ ಜೀವನ ಸುಖಮಯ ಗೊಳಿಸಲಿ. ಪೂರ್ಣ ಮಗ್ಫಿರತ್, ಮರ್ಹಮತ್ ಕರುಣಿಸಲಿ.ಎಲ್ಲರೂ ಸಾಧ್ಯ ವಾದಷ್ಟು ಖುರ್ಆನ್, ತಹ್ಲೀಲ್ ಹೇಳಿ ದುಆ ಮಾಡ ಬೇಕಾಗಿ ವಿನಂತಿಸುತ್ತಿದ್ದೇವೆ.

ಹಾಜಿ ಹಮೀದ್ ಕೊಡಂಗಾಯಿ
SMA ಈಷ್ಟ್ ಜಿಲ್ಲಾಅಧ್ಯಕ್ಷರು ಮತ್ತು ಸರ್ವ ಸದಸ್ಯರು