janadhvani

Kannada Online News Paper

ಮದರಸಗಳಲ್ಲಿ ತಾಲಿಬಾನಿಗಳ ಸೃಷ್ಟಿ- ಸಿ.ಟಿ.ರವಿ‌ ಹೇಳಿಕೆಗೆ SMA ಖಂಡನೆ

ಮುರ: ಮದರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ‌ ಅವರ ಹೇಳಿಕೆ ಪರಮತ ದ್ವೇಷದ ಪರಮಾವಧಿ. ಸರ್ವ ಧರ್ಮವನ್ನು ಸಮವಾಗಿ ಕಾನು ನೆರೆಮನೆಯಾತ ಹಸಿದಿರುವಾಗ ಉಂಡು ಮಲಗುವವನು ನನ್ನವನಲ್ಲ ಎಂಬ ಪ್ರವಾದಿ ಸ.ಅ ರವರ ವಚನ ಕಲಿಸುವ ಕೇಂದ್ರವಾಗಿದೆ ಮದರಸ.

ಬೆಳೆದು ಬರುತ್ತಿರುವ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಧರ್ಮದ ಬಾಲಪಾಠ ಹೇಳಿಕೊಟ್ಟು ಅವರನ್ನು ಧರ್ಮಾಧರಿತ ಮತ್ತು ಶಾಂತಿ, ಸೌಹಾರ್ದತೆ ಸಹಬಾಳ್ವೆ ನಡೆಸಲು ಕಲಿಸಿ, ಅಪ್ರತಿಮ ದೇಶಪ್ರೇಮಿಗಳನ್ನಾಗಿ ಮಾರ್ಪಡಿಸುವ ದೇಶದ ಶಾಂತಿ ಕೇಂದ್ರಗಳಾದ ಮದ್ರಸಗಳು ಮಾನವೀಯ ಮೌಲ್ಯಗಳನ್ನು ತಿಳಿಯಪಡಿಸುದಾಗಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಜನಪ್ರತಿನಿಧಿಯೂ ಆಗಿರುವ ಸಿ.ಟಿ.ರವಿ ಯವರಿಂದ ಇಂಥಾ ಮಾತುಗಳು ಬರಬಾರದು. ಇದನ್ನು ಮದರಸ ಮೇನೇಜ್ ಮೆಂಟ್ ಅಸೋಶಿಯೇಶನ್ ಎಸ್ ಎಮ್ ಎ ಮುರ ರಿಜಿನಲ್ ತೀವ್ರವಾಗಿ ಖಂಡಿಸುತ್ತಿದೆ.

✍🏻 ವಝೀರ್ ಬಂಗಾಡಿ
(ಅಧ್ಯಕ್ಷರು SMA ಮುರ ರಿಜಿನಲ್)